ಇಂದು ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ.

ಸುಭಾಷ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಒಂದೊಂದು ಸಂದೇಶಗಳು ಜನರಲ್ಲಿ ಹೋರಾಟದ ಕಿಚ್ಚನ್ನ ಹುಟ್ಟುಹಾಕಿದ್ದವು. ಅದರಲ್ಲಿ ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶ ಸ್ವಾತಂತ್ರ್ಯ ಪೂರ್ವದಲ್ಲೇ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಸೇರುವಂತೆ ಮಾಡಿತ್ತು.

ಇಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನ. ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇಂದು ದೇಶಾದ್ಯಂತ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ನೇತಾಜಿ ಅವರು 1897 ಜನವರಿ 23 ರಂದು ಒಡಿಶಾದಲ್ಲಿ ಜನಿಸಿದರು.

ಸುಭಾಷ್ ಚಂದ್ರ ಬೋಸ್, ಭಾರತದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರು ಇವರು. ಇವರನ್ನು ನೇತಾಜಿ ಎಂದೇ ಕರೆಯಲಾಗುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಇವರು ಕೂಡಾ ಒಬ್ಬರು.

ಇವರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಒಂದೊಂದು ಸಂದೇಶಗಳು ಜನರಲ್ಲಿ ಹೋರಾಟದ ಕಿಚ್ಚನ್ನ ಹುಟ್ಟುಹಾಕಿದ್ದವು. ಅದರಲ್ಲಿ ‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶ ಸ್ವಾತಂತ್ರ್ಯ ಪೂರ್ವದಲ್ಲೇ ಅನೇಕ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಟದಲ್ಲಿ ಸೇರುವಂತೆ ಮಾಡಿತ್ತು.

ಸುಭಾಷ್ ಚಂದ್ರ ಬೋಸ್, ಅವರು 1897 ಜನವರಿ 23 ರಂದು ಒಡಿಶಾದ ಕಟಕ್ನಲ್ಲಿ ಜನಿಸಿದರು. ಇವರ ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಈ ದಂಪತಿಗಳಿಗೆ 14 ಜನ ಮಕ್ಕಳು. ಅದರಲ್ಲಿ ಸುಭಾಷ್ ಚಂದ್ರ ಬೋಸ್ ಅವರು 9 ನೇಯವರು. ಇವರು ಎಮಿಲಿ ಶೆಂಕ್ಲ್ ಅವರನ್ನು ಜೀವನ ಸಂಗಾತಿಯಾಗಿ ಸ್ವೀಕರಿಸಿದ್ದರು. ಇವರಿಗೆ ಅನಿತಾ ಬೋಸ್ ಫಾಫ್ ಎಂಬ ಮಗಳಿದ್ದು, ಇವರು ಜರ್ಮನಿಯಲ್ಲಿ ಜನಪ್ರಿಯ ಅರ್ಥಶಾಸ್ತ್ರಜ್ಞರಾಗಿದ್ದರು.

ಸುಭಾಷ್ ಚಂದ್ರ ಬೋಸ್ ಅವರು ಕಟಕ್ನ ರಯಾವೆನ್ ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್ ಅವರಿಂದ ಪ್ರೇರೆಣೆ ಪಡೆದು ಮುಂದೆ ಸ್ವಾಮಿ ವಿವೇಕಾನಂದರ ಭಾಷಣ, ಸಾಹಿತ್ಯ ಮತ್ತು ಅವರ ಬರವಣಿಗೆಗೆ ಪ್ರೇರೆಪಿತರಾಗಿದ್ದರು.

1919 ರಲ್ಲಿ ತತ್ವಶಾಸ್ತ್ರದಲ್ಲಿ ಬಿ.ಎ ಪದವಿ ಪಡೆದ ಅವರು, ನಂತರ ಐಸಿಎಸ್ ಪರೀಕ್ಷೆಗಾಗಿ ಇಂಗ್ಲೆಡಿಗೆ ತೆರಳಿದರು. 1920 ರಲ್ಲಿ ಐಸಿಎಸ್ ಪದವಿ ಪಡೆದರು. ವಿದೇಶಿ ನೌಕರಿ ಒಲ್ಲೆ ಎಂದು ಗಳಿಸಿದ್ದ ಐಸಿಎಸ್ ಪದವಿಯನ್ನು ಬ್ರಿಟಿಷರಿಗೆ ಮರಳಿಸಿದ್ದರು.

ಶ್ರೀಘ್ರ ಸ್ವಾತಂತ್ರ್ಯಕ್ಕಾಗಿ ಬೋಸ್ ಅವರು ಮಂಡಿಸುತ್ತಿದ್ದ ವಾದಗಳು ಮತ್ತು ಅವರ ನಿಲುವುಗಳನ್ನ ಕಾಂಗ್ರೆಸ್ನ ಮಂದಗಾಮಿ ಗುಂಪಿಗೆ ಅಸಹನಿಯವಾಗಿತ್ತು. ಸ್ವತಃ ಗಾಂಧೀಜಿ ಅವರೇ ಹಲವು ಬಾರಿ ಬೋಸ್ರನ್ನು ಟೀಕಿಸಿದ್ದರು. ಆದರೆ ಬೋಸ್ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲದ ಯಾರೊಬ್ಬ ನಾಯಕರಲ್ಲೂ ಇರಲಿಲ್ಲ. ಆಸ್ಟ್ರೀಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹಲವು ದೇಶಗಳನ್ನು ಸುತ್ತಿದ್ದ ಬೋಸ್ ಅವರು, ಉತ್ತಮ ರಾಜಕೀಯ ಜ್ಞಾನವನ್ನು ಹೊಂದಿದ್ದರು.
20 ತಿಂಗಳು ಬಳಿಕ ಇಂಗ್ಲೆಂಡ್ ವಾಸದ ನಂತರ ಮುಂಬಯಿಗೆ ಮರಳಿದ ಬೋಸ್, ಅಂದೇ ಗಾಂಧೀಜಿ ಅವರನ್ನು ಮೊದಲು ಭೇಟಿ ಮಾಡಿದರು. 1921 ರಲ್ಲಿ ಚಿತ್ತರಂಜನ್ ದಾಸ್ ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಈ ವೇಳೆಯಲ್ಲಿ ಬ್ರಿಟಷ್ ಸರ್ಕಾರ ಅವರಿಗೆ ಆರು ತಿಂಗಳ ಸಜೆ ವಿಧಿಸಿತ್ತು. ಇದನ್ನು ಸುಭಾಷ್ ಚಂದ್ರ ಬೋಸ್ ತೀವ್ರವಾಗಿ ವಿರೋಧಿಸಿದ್ದರು
ಕಾಂಗ್ರೆಸ್ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್ ದಾಸ್ ಅವರು ಸ್ವರಾಜ್ಯಪಕ್ಷ ವನ್ನು ಸ್ಥಾಪನೆ ಮಾಡಿದರು. ಬೋಸ್ ಅವರು ಚಿತ್ತರಂಜನ್ ದಾಸ್ ಅವರ ಜತೆಗೆ ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ದಾಸ್ ಅವರು ಸ್ಥಾಪಿಸಿದ್ದ ‘ಫಾವರ್ಡ್’ ದಿನಪತ್ರಿಕೆಯ ನಿರ್ವಹಣೆಯ ಜವಬ್ದಾರಿಯನ್ನು ಬೋಸ್ ಅವರು ನಿಭಾಯಿಸಿದ್ದರು.
ಮೊದಲು ಪಕ್ಷವಾಗಿ ಕಟ್ಟಿದ ಆಜಾದ್ ಹಿಂದ್ ಸೇನೆ (ಐಎನ್ಎ) ಮುಂದೆ ಸೈನ್ಯವಾಗಿ ರೂಪಗೊಂಡಿತು. ಈ ಸೇನೆಗೆ ನಿವೃತ್ತ ಯುದ್ದ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ಸೇನೆ ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ವಿಸ್ತರಿಸಿತ್ತು. ಅನೇಕ ಜನರು ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಸೂಚಿಸಿದ್ದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದರು . ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆ ಯನ್ನು ಸ್ಥಾಪಿಸಿದರು. ಇವರು ಟೈವಾನ್ ನಲ್ಲಿ 1945 ಆಗಸ್ಟ್ 18 ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಹೇಳಲಾಗುತ್ತಿದ್ದು, ಈ ಘಟನೆ ವಿವಾದಿತವಾಗಿಯೇ ಉಳಿದಿದೆ.