ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರ ಪುಣ್ಯ ಸ್ಮರಣೆ

ಸಂಗೀತ ಲೋಕದ ಅನರ್ಘ್ಯ ರತ್ನ, ಗಾನ ಗಂಧರ್ವ, ಭಾರತರತ್ನ ಪಂಡಿತ್ ಭೀಮಸೇನ ಜೋಶಿ ಅವರ ಪುಣ್ಯ ಸ್ಮರಣೆಯಂದು ಗೌರವಪೂರ್ವಕ ನಮನಗಳು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆಗಳು ಅವಿಸ್ಮರಣೀಯ.

ಪಂಡಿತ್ ಭೀಮಸೇನ ಜೋಶಿ(88) ಅವರು 4 ಫೆಬ್ರವರಿ 1922 ರಲ್ಲಿ ಗದಗ್ ಜಿಲ್ಲೆಯ ರೋಣ ತಾಲೂಕಿನಲ್ಲಿ ಜನಿಸಿದರು, 24 ಜನವರಿ 2011 ಪುಣೆ, ಮಹಾರಾಷ್ಟ್ರ ದಲ್ಲಿ ಅವರು ಮರಣ ಹೊಂದಿದರು

1972 ರಲ್ಲಿ ಪದ್ಮ ಶ್ರೀ ಪ್ರಶಸ್ತಿ
1985 ರಲ್ಲಿ ಪದ್ಮ ಭೂಷಣ ಪ್ರಶಸ್ತಿ
1998 ರಲ್ಲಿ ಸಂಗೀತ ನಾಟಕ ಅಕಾಡೆಮಿ ರತ್ನ
1999 ರಲ್ಲಿ ಪದ್ಮವಿಭೂಷಣ
2009 ರಲ್ಲಿ ಭಾರತ ರತ್ನ
ಇಷ್ಟು ಪಂಡಿತ್ ಭೀಮಸೇನ ಜೋಶಿ ಅವರಿಗೆ ಬಂದಂತಹ ಪ್ರಶಸ್ತಿಗಳು

ಕೊಲ್ಕತ್ತಾಕ್ಕೆ ಅವರು ವರ್ಷದಲ್ಲಿ ಸುಮಾರು ೨೦ ಬಾರಿಯಾದರೂ ಹೋಗಿಬರುತ್ತಿದ್ದರು. ಕೊಲ್ಕತ್ತಾದಲ್ಲಿನ ಹಲವಾರು ಹಿಂದೂಸ್ತಾನೀ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಒಂದು ಪ್ರತಿಷ್ಠೆಯ ಸಂಕೇತವಾಗಿತ್ತು. ಭೀಮಸೇನರಿಗೆ ಅಲ್ಲಿಂದ ತಪ್ಪದೆ ಆಮಂತ್ರಣ ಬರುತ್ತಿತ್ತು. ಹಾಗೆಯೇ ಆ ನಗರದಲ್ಲಿ ಹಲವಾರು ಸಂಗೀತ ಸಮ್ಮೇಳನಗಳು ವರ್ಷಪೂರ್ತಿ ಆಯೋಜಿತಗೊಳ್ಳುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ,

‘ಆಲ್ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್’,
‘ತಾನ್ಸೇನ್ ಮ್ಯೂಸಿಕ್ ಕಾನ್ಪರೆನ್ಸ್’,
‘ಡೋವರ್ ಲೇನ್ ಮ್ಯೂಸಿಕ್ ಕಾನ್ಪರೆನ್ಸ್’,
ಹಿಂದುಸ್ತಾನಿ ಸಂಗೀತದ ಖಯಾಲ್ ಕೃತಿಗಳ ಹಾಡುಗಾರಿಕೆಗೆ ಜೋಷಿಯವರು ಪ್ರಸಿದ್ಧರು.

ಕನ್ನಡ ಭಾಷೆಯ ದಾಸಪದವಾದ ಭಾಗ್ಯದ ಲಕ್ಷ್ಮಿ ಬಾರಮ್ಮ ಭೀಮಸೇನ ಜೋಷಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧವಾಗಿದೆ. ಕನ್ನಡದಲ್ಲಿ ಭೀಮಸೇನ್ ಜೋಷಿಯವರ ಮುಖ್ಯ ಆಲ್ಬಮ್ ಗಳೆಂದರೆ ದಾಸವಾಣಿ ಮತ್ತು ಎನ್ನ ಪಾಲಿಸೊ ಹಾಗೆಯೇ ಹಿಂದಿ ಭಜನೆಗಳು, ಮರಾಠಿ ಅಭಂಗ ಮತ್ತು ನಾಟ್ಯಗೀತೆಗಳನ್ನು ಸಹ ಬಹಳಷ್ಟು ಹಾಡಿದ್ದಾರೆ.