ಬೆಂಗಳೂರು: 108 ಆಂಬುಲೆನ್ಸ್ ಸೇವೆ ಸಮಸ್ಯೆಗಳ ಹೆಚ್ಚಾಗಿವೆ . ಜೀವ ಉಳಿಸಬೇಕಿರೋ ಆಂಬುಲೆನ್ಸ್‌ಗಳು ಡಕೋಟ ಎಕ್ಸ್‌ಪ್ರೆಸ್ ಆಗ್ತಿವೆ. 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಗುಜರಿಗೆ ತಲುಪಿದ್ದು. 340 ಆಂಬುಲೆನ್ಸ್‌ಗಳ ಸ್ಥಗಿತಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.
ಕಳೆದ ಎರಡ್ಮೂರು ತಿಂಗಳ ಹಿಂದೆ ಸಂಬಳ ವಿಚಾರಕ್ಕೆ ನೌಕರರು ಮುಷ್ಕರ ಮಾಡಿ 108 ಸೇವೆಯಲ್ಲಿ ಆಗುತ್ತಿರುವ ಅನ್ಯಾಯವನ್ನು ತೆರೆದಿಟ್ಟು ಸೇವೆ ಸ್ಥಗಿತಕ್ಕೆ ಮುಂದಾಗಿದ್ರು. ಈ ಘಟನೆ ಆದ ಬಳಿಕ ಈಗ ಮತ್ತೊಂದು ವಿಚಾರ ಬಯಲಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದ 108 ಸೇವೆಯ ಆಂಬುಲೆನ್ಸ್‌ಗಳು ಗುಜರಿಗೆ ತಲುಪಿರೋ ವಿಚಾರ ಬಯಲಾಗಿದೆ. ಇಂಜಿನ್ ಸಮಸ್ಯೆ, ಬೋರ್ ಸಮಸ್ಯೆ ಮತ್ತು ಟೆಕ್ನಿಕಲ್ ಸಮಸ್ಯೆಯಿಂದ 340ಕ್ಕೂ ಹೆಚ್ಚು ಆಂಬುಲೆನ್ಸ್‌ಗಳನ್ನು ಸ್ಥಗಿತ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿ ಒಟ್ಟು 709 ಆಂಬುಲೆನ್ಸ್‌ಗಳಿದ್ದು, ಅದರಲ್ಲಿ 340 ಆಂಬುಲೆನ್ಸ್‌ಗಳು ಕೆಟ್ಟು ನಿಂತಿವೆ. ಕೆಲವೊಂದನ್ನು ರೆಡಿ ಮಾಡಿಸಿಕೊಂಡು ಓಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.