ಪೊಲೀಸರ ವೇಷದಲ್ಲಿ 80 ಲಕ್ಷ ರೂ ಸುಲಿಗೆ ಮಾಡಿ, ಸ್ಮಗ್ಲರ್ ಗಳ ಮೋಜು ಮಸ್ತಿ

ಬೆಂಗಳೂರು : ತಮ್ಮನ್ನು ತಾವು ಪೊಲೀಸ್ ಎಂದು ಕರೆದುಕೊಂಡು 80ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದ ಕುಖ್ಯಾತ ಅಂತರ್ ರಾಜ್ಯ ಸ್ಮಗ್ಲರ್ ಗಳನ್ನು ಈಗ ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ,

ಡಿಸೆಂಬರ್ 27 ನೇ ತಾರೀಕಿನಂದು ಕಾರಿನಲ್ಲಿ ಬಂದಿದ್ದ ನಾಲ್ವಾರು ಶಾಂತಿನಗರದ ಬಸ್ ನಿಲ್ದಾಣದ ಹತ್ತಿರ ಕೆ ಎಚ್ ರಸ್ತೆಯ ಸಿಗ್ನಲ್ ಬಳಿ, ನಾವು ಪೊಲೀಸ್ ಎಂದುಕೊಂಡು ದರೋಡೆ ನೆಡೆಸಿದ್ದರು,

ಸಂತ್ರಸ್ತರು, ಅಡಕೆ ವ್ಯಾಪಾರಕ್ಕೆ ಸಂಬಂದಿಸಿದ 80 ಲಕ್ಷ ರೂಪಾಯಿ ಹಣವನ್ನು ಸ್ವಿಫ್ಟ್ ಕಾರಿನಲ್ಲಿ ಸಾಗಿಸುತ್ತಿದ್ದರು ಆಗ ಕಾರಿಗೆ ನಕಲಿ ನಂಬರ್ ಪ್ಲೇಟ್ ಅನ್ನು ಹಾಕಿದ್ದರು.ಭತಲ್ ಶಿವರಾಮ್, ಶೇಖ್ ಚೆoಪತಿ, ಶೇಖ್ ಚೆoಪತಿ, ಜಾಕಿರ್ ಎನ್ನುವ ನಾಲ್ವರು ಖತರ್ನಾಕ್ ಸ್ಮಗ್ಲರ್ ಗಳು, ಹಣವನ್ನು ಕದ್ದ ನಂತರ ಮೋಜು ಮಸ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು,

ಇದಾದ ಬಳಿಕ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಇದರ ಆಧಾರದ ಮೇಲೆ ತನಿಖೆ ನೆಡೆಸಿದಾಗ ಈ ಆರೋಪಿಗಳು ಅರೆಸ್ಟ್ ಆಗಿದ್ದಾರೆ, ಸಧ್ಯಕ್ಕೆ ಪೊಲೀಸರು ಆರೋಪಿಗಳನ್ನು ತನಿಖೆಗೆ ಒಳಪಡಿಸಿದ್ದಾರೆ