ಸಂಪಿಗೆ, ಶ್ರೀ ಸ್ವರ್ಣ ಗೌರಮ್ಮನವರ ಜಾತ್ರಾ ಮಹೋತ್ಸವ

ತುರುವೇಕೆರೆ : ಶತ ಶತಮಾನಗಳಿಂದಲೂ ಚಂಪಕಾಪುರಿ ಎಂದೇ ಪ್ರಸಿದ್ಧವಾಗಿರುವ ಸಂಪಿಗೆ ಗ್ರಾಮದ ಆದಿದೇವತೆ ಶಕ್ತಿ ಸ್ವರೂಪಿಣಿ ಶ್ರೀ ಸ್ವರ್ಣ ಗೌರಮ್ಮನವರ ವಿಸರ್ಜನಾ ಮಹೋತ್ಸವವು ದಿನಾಂಕ 29-01-2023 ಭಾನುವಾರ ದಿಂದ ಪ್ರಾರಂಭಗೊಂಡು 30-01-2023 ರ ವರೆಗೆ ನೆಡೆಯಲಿದೆ ದಿ 30-01-2023 ರ ಸೋಮವಾರ ಬೆಳಗ್ಗೆ ಸಮಯ 9:00 ರ ನಂತರ ಸಂಪಿಗೆ ಕೆರೆಯಲ್ಲಿ ಪುಷ್ಪಾಲಂಕೃತ ತೆಪ್ಪೋತ್ಸವದೊಂದಿಗೆ ಶ್ರೀ ಅಮ್ಮನವರ ವಿಸರ್ಜನಾ ಮಹೋತ್ಸವವು ಜರುಗಲಿದೆ ,

ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ರೀತಿಯಲ್ಲಿ ಬಂದು ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ತುರುವೇಕೆರೆ ಶಾಸಕರಾದ ಮಸಾಲೆ ಜಯರಾಂ, ಸಂಪಿಗೆ ಗ್ರಾಮಸ್ಥರು ಹಾಗೂ ಆಜು ಬಾಜು ಗ್ರಾಮಸ್ಥರು ಕೋರಿದ್ದಾರೆ

29-01-2023 ರ ರಾತ್ರಿ 9:00 ಗಂಟೆಗೆ ಜ್ಯೋತಿ ಮೆಲೋಡಿಸ್ ತಂಡದಿಂದ ಆರ್ಕೆಸ್ಟ್ರಾ, ಹಾಗೂ ತಾಂಜಾವೂರಿನ ಕೀಲು ಕುದುರೆ ನರ್ತನ,, ಭದ್ರಾಕಾಳಿ ಸಮೇತ ಲಿಂಗದವೀರರ ಕುಣಿತ ಮತ್ತು ಸಿಡಿಮದ್ದಿನ ಪ್ರದರ್ಶನವನ್ನು ಆಯೋಜಿಸಲಾಗಿದೆ,