ಮೇಯರ್ ಕಪ್ ತುಮಕೂರು – 62ಕೆಜಿ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿನಿ

ತುಮಕೂರು ನಗರದಲ್ಲಿ ಕಳೆದ 3 ದಿನಗಳಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆಡೆಯುತ್ತಿದ್ದ ಮೇಯರ್ ಕಪ್ ಟೂರ್ನಮೆಂಟ್ ಅನ್ನು ತುಮಕೂರು ನಗರದ ಶಾಸಕರಾದ ಜ್ಯೋತಿ ಗಣೇಶ್ ಅವರು ಉದ್ಘಾಟನೆ ಮಾಡಿದ್ದರು.

ಮೇಯರ್ ಕಪ್ ಟೂರ್ನಮೆಂಟ್ ನಲ್ಲಿ ಹಲವಾರು ಕ್ರೀಡೆಗಳನ್ನು ಆಯೋಜಿಸಲಾಗಿತ್ತು, ಅದರಲ್ಲಿ ಒಂದಾದ ಕುಸ್ತಿ ಕ್ರೀಡೆಯಲ್ಲಿ, ಯಶಶ್ವಿನಿ ಎನ್ನುವ ವಿದ್ಯಾರ್ಥಿನಿಯು 62 ಕೆಜಿ ಕುಸ್ತಿಯ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ,ಇವರಿಗೆ ತುಮಕೂರು ನಗರದ ಮಹಾಪೌರರಾದ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಅವರು ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.