ತುಮಕೂರು ನಗರದ ಮುಂದಿನ ಶಾಸಕ ನಾನೇ: ಪ್ರಚಾರ ಆರಂಭಿಸಿದ ಆಕಾಂಕ್ಷಿ

ತುಮಕೂರು: ಮುಂದಿನ ಶಾಸಕ ನಾನೇ ಎಂದು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಸ್ವಯಂ ಘೋಷಣೆ ಮಾಡಿಕೊಂಡು ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.

ಅಟ್ಟಿಕಾ ಬಾಬು ಯಾವುದೇ ಪಕ್ಷದಲ್ಲಿ ಅಧಿಕೃತವಾಗಿ ಗುರುತಿಸಿಕೊಂಡಿಲ್ಲ. ಆದರೂ ತುಮಕೂರು ನಗರದ ಕಾಂಗ್ರೆಸ್ ಟಿಕೆಟ್‌ ಸಿಗುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅಟ್ಟಿಕಾ ಬಾಬು ಮುಂದಿನ ಶಾಸಕ ನಾನೇ ಎಂದು ಪ್ರಚಾರ ಶುರುಮಾಡಿದ್ದಾರೆ.

ಅಟ್ಟಿಕಾ ಬಾಬು ಮುಸ್ಲಿಂ ಸಮುದಾಯಕ್ಕೆ ಸೇರಿದವರಾದರೂ ಹಿಂದೂ ದೇವಾಲಯಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಪ್ರಚಾರ ಶುರು ಮಾಡಿದ್ದಾರೆ.ತುಮಕೂರು ನಗರದ ದೇವರಾಯಪಟ್ಟಣದ ದುರ್ಗಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತುರುಸಿನ ಪ್ರಚಾರ ಶುರುಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರು ಸೇರಿದಂತೆ ತಮ್ಮ ಸಮುದಾಯದವರೇ ಆದ ಜಮಿರ್ ಅಹಮದ್ ಖಾನ್ ಅವರ ಬೆಂಬಲ ನನಗಿದೆ. ಹಾಗಾಗಿ ಕಾಂಗ್ರೆಸ್ ಟಿಕೆಟ್ ನನಗೆ ಸಿಗಲಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಅಟ್ಟಿಕಾ‌ ಬಾಬು ಮುಂದಿನ ಶಾಸಕ ನಾನೇ‌ ಎಂದು ಸ್ವಯಂಘೋಷಣೆ ಮಾಡಿಕೊಂಡು ಬಿರುಸಿನ ಪ್ರಚಾರ ಆರಂಭಿಸಿ ಅಚ್ಚರಿ ಮೂಡಿಸಿದ್ದಾರೆ.