ಪ್ರಾಥಮಿಕ ಆರೋಗ್ಯ ಕೇಂದ್ರ ಮಾವಿನಕೆರೆ ವತಿಯಿಂದ – “ಗುಲಾಬಿ ಆಂದೋಲನ”

ತುರುವೇಕೆರೆ : ತಂಬಾಕು ಉತ್ಪನ್ನಗಳ ಬಳಕೆಯಿಂದ ಜನಸಾಮಾನ್ಯರಿಗೆ ಹಲವಾರು ರೀತಿಯ ಗಂಭೀರ ಸ್ವರೂಪದ ಕಾಯಿಲೆಗಳು ಕಂಡು ಬರುತ್ತಿದ್ದು ಇದರ ವಿರುದ್ಧ ಗುಲಾಬಿ ಆಂದೋಲನವನ್ನು ನಡೆಸುವುದಾಗಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ರವರ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತುರುವೇಕೆರೆ ತಾಲ್ಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ಮಾವಿನಕೆರೆ ಹಾಗೂ ಸರ್ಕಾರಿ ಶಾಲಾ ಸಹಯೋಗದೊಂದಿಗೆ ಇಂದು ಗುಲಾಬಿ ಆಂದೋಲನವನ್ನು ನಡೆಸಲಾಯಿತು.

ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರುಗಳಿಗೆ ಶಾಲಾ ಮಕ್ಕಳಿಂದ ಗುಲಾಬಿ ನೀಡುವುದರ ಮೂಲಕ ಗುಲಾಬಿ ಆಂದೋಲನದ ಅರಿವು ಮೂಡಿಸಿದರು, ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ ಹೆಚ್, ಪ್ರಾ. ಆ. ಸುರಕ್ಷಣಾಧಿಕಾರಿ ಭಾಗ್ಯಮ್ಮ, ಮುಖ್ಯ ಶಿಕ್ಷಕರಾದ ಗಿರಿಜಮ್ಮ ಹಾಗೂ ಸಹ ಶಿಕ್ಷಕರು ಆಶಾ ಕಾರ್ಯಕರ್ತೆಯರು ಶಾಲಾ ಮಕ್ಕಳು ಉಪಸ್ಥಿತರಿದ್ದರು.