ತುಮಕೂರು: ನಗರದ ಶಿರಾಗೇಟ್ ನ ನಾಗಣ್ಣನ ಪಾಳ್ಯದಲ್ಲಿ ಬೈಕ್ ಕಳ್ಳರ ಹಾವಳಿ ಮಿತಿಮೀರಿದ್ದು, ಒಂದೇ ವಾರದಲ್ಲಿ ಮೂರು ಯಮಹಾ ಬೈಕ್ ಗಳನ್ನು ಕಳ್ಳರು ಕಳವು ಮಾಡಿದ್ದಾರೆ.
ಬೈಕ್ ಗಳಿಗೆ ಕೀ ಹಾಕಿ ಕಾಂಪೌಂಡ್ ನಲ್ಲಿ ನಿಲ್ಲಿಸಿದ್ದ ಸಮಯದಲ್ಲಿ ಬೈಕ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ವಾಹನ ಸವಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಭಾಗದಲ್ಲಿ ಕಳುವ ಪ್ರಕರಣಗಳು ಹೆಚ್ಚುತ್ತಿದ್ದು ರಾತ್ರಿ ಬೀಟ್ ಪೊಲೀಸರು ಬಾರದೆ ಇರುವುದರಿಂದ ಇಂತಹ ಪ್ರಕರಣಗಳು ಹೆಚ್ಚಲು ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ, ಕಳ್ಳರ ಭಯದಿಂದ ಸಾರ್ವಜನಿಕರು ನೆಮ್ಮದಿಯಿಂದ ನಿದ್ರೆ ಮಾಡದಂತಹ ಪರಿಸ್ಥಿತಿ ಬಂದಿದ್ದು ಕೂಡಲೇ ಪೊಲೀಸ್ ವರಿಷ್ಠ ಅಧಿಕಾರಿಗಳು ಗಮನ ಹರಿಸಿ ಮೇಲ್ಕಂಡ ಭಾಗದಲ್ಲಿ ಬೀಟ್ ಪೋಲಿಸರನ್ನು ನಿಯೋಜಿಸುವಂತೆ ಶಿರಾಗೇಟ್ ಸಾರ್ವಜನಿಕರು ಮನವಿ ಮಾಡಿದ್ದಾರೆ