ಬೆಂಗಳೂರು: ಟ್ರಾಫಿಕ್ ಪೊಲೀಸರ 50% ಆಫರ್‍ಗೆ ಬೆಂಗಳೂರಿಗರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಒಂದೇ ದಿನ ದಾಖಲೆ ಮಟ್ಟದಲ್ಲಿ ಟ್ರಾಫಿಕ್ ಫೈನ್ ಸಂಗ್ರಹವಾಗಿದೆ.
50% ಡಿಸ್ಕೌಂಟ್ ನೀಡಿದ ಹಿನ್ನೆಲೆಯಲ್ಲಿ ಮೊದಲ ದಿನವೇ ಮೂರು ಕೋಟಿಗೂ ಹೆಚ್ಚು ಅಧಿಕ ದಂಡ ಸಂಗ್ರಹವಾಗಿದೆ. ನೆನ್ನೆ ಸಂಜೆ 5 ಗಂಟೆವರೆಗೂ ಬರೋಬ್ಬರಿ 3 ಕೋಟಿಗೂ ಅಧಿಕ ಫೈನ್ ಕಟ್ಟಲಾಗಿದೆ. ಕೆಲವರು ಪೊಲೀಸ್ ಠಾಣೆಗಳಿಗೆ ತೆರಳಿ ದಂಡ ಪಾವತಿಸಿದ್ರೆ, ಇನ್ನೂ ಕೆಲವರು ಪೇಟಿಯಂನಲ್ಲಿ, ಇನ್ನು ಕೆಲವರು ಟ್ರಾಫಿಕ್ ಪೊಲೀಸರು ನೀಡಿದ ಆ್ಯಪ್, ಪಿಡಿಎನಲ್ಲಿ ದಂಡ ಕಟ್ಟಿದ್ರು. ಪಿಡಿಎಯಲ್ಲಿ 61,174 ಕೇಸುಗಳಲ್ಲಿ 1,48,65,100 ಕೋಟಿ ದಂಡ ಸಂಗ್ರಹವಾದ್ರೆ, ಪೇಟಿಎಂ ಆಪ್‍ನಿಂದ 75,185 ಕೇಸುಗಳಲ್ಲಿ 2,30,77,900 ಕೋಟಿ, ಟಿಎಂಸಿ ಕೇಂದ್ರದಲ್ಲಿ 337 ಕೇಸ್‍ಗಳಲ್ಲಿ 89,650 ರೂ, ಬೆಂಗಳೂರು ಓನ್‍ನಲ್ಲಿ 6,161 ಕೇಸ್‍ಗಳಲ್ಲಿ 16,21,600 ರೂ ದಂಡ, ಒಟ್ಟು 1,42,859 ಕೇಸುಗಳಲ್ಲಿ 3,96,54,250 ಕೋಟಿ ರೂ ದಂಡ ಸಂಗ್ರಹ ಮಾಡಲಾಗಿದೆ.
50% ಆಫರ್ ಫೆಬ್ರವರಿ 11ರವರೆಗೂ ಅನ್ವಯವಾಗಲಿದೆ. ನೀವು ಕೂಡ ಸಂಚಾರ ನಿಯಮವನ್ನ ಉಲ್ಲಂಘನೆ ಮಾಡಿ ದಂಡ ಪಾವತಿ ಮಾಡದೇ ಇದ್ರೆ, ಆಫರ್ ಇರುವಾಗ್ಲೆ ಪಾವತಿ ಮಾಡಿ.