ಕ್ಯಾನ್ಸರ್ ಎಂಬ ಮಹಾರೋಗ ಇತ್ತೀಚಿನ ವರ್ಷಗಳಲ್ಲಿ ತುಂಬಾನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ರೋಗ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುವುದು.
ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಆಹಾರಪದ್ಧತಿಗಳು ಸಹಾಯ ಮಾಡುತ್ತದೆ, ಅದರಲ್ಲೂ ನಮ್ಮ ಭಾರತದ ಮಸಾಲೆ ಪದಾರ್ಥಗಳು ಕ್ಯಾನ್ಸರ್ ತಡೆಗಟ್ಟುವ ಗುಣವನ್ನು ಹೊಂದಿದೆ.
ಕ್ಯಾನ್ಸರ್ ತಡೆಗಟ್ಟುವ ಆ ಮಸಾಲೆ ಪದಾರ್ಥಗಳು.
ಅರಿಶಿಣ.
ಅನೇಕ ಸಮಸ್ಯೆಗಳನ್ನು ಗುಣಪಡಿಸುವ ಗುಣ ಅರಿಶಿಣದಲ್ಲಿದೆ. ನಮಗೆ ಏನಾದರೂ ಪುಟ್ಟ ಗಾಯವಾದರೆ ಸ್ವಲ್ಪ ಅರಿಶಿಣ ಹಚ್ಚಿದರೆ ಸಾಕು ಬೇಗನೆ ಗಾಯ ಗುಣಮುಖವಾಗುವುದು. ಇನ್ನು ಇದು ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಗುಣವನ್ನು ಹೊಂದಿದ್ದು ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅರಿಶಿಣದಲ್ಲಿ ಪಾಲಿಪೀನೋಲ್ ಕರ್ಕ್ಯೂಮಿನ್ (polyphenol Curcumin) ಎಂಬ ಅಂಶವಿದೆ, ಇದು ಕ್ಯಾನ್ಸರ್‌ಕಣಗಳನ್ನು ನಾಶಪಡಿಸುತ್ತದೆ ಎಂಬುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಪ್ರೊಸ್ಟ್ರೇಟ್ ಕ್ಯಾನ್ಸರ್, ಮೆಲನೋಮಾ, ಸ್ತನ ಕ್ಯಾನ್ಸರ್, ಬ್ರೈನ್ ಟ್ಯೂಮರ್, ಪಿತ್ತ ಜನಕಾಂಗದ ಕ್ಯಾನ್ಸರ್, ಲುಕೆಮಿಯಾ ಈ ಬಗೆಯ ಕ್ಯಾನ್ಸರ್ ತಡೆಗಟ್ಟುವ ಗುಣ ಅರಿಶಿಣದಲ್ಲಿದೆ.
ಸೋಂಪು:
ಸೋಂಪಿನಲ್ಲಿರುವ ‘Anethole’ ಎಂಬ ಅಂಶ ಕ್ಯಾನ್ಸರ್ ತಡೆಗಟ್ಟುವ ಗುಣವನ್ನು ಹೊಂದಿದೆ. ಈ ಅಂಶ ಕ್ಯಾನ್ಸರ್ ಕಣಗಳ ಹೆಚ್ಚಾಗುವುದನ್ನು ತಡೆಗಟ್ಟುವ ಗುಣವನ್ನು ಹೊಂದಿದೆ. ನಾವು ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ಜೀರ್ಣವಾಗಲಿ ಎಂದು ಸ್ವಲ್ಪ ಸೋಂಪು ಬಾಯಿಗೆ ಹಾಕುತ್ತೇವೆ, ಆದರೆ ಸೋಂಪು ಕ್ಯಾನ್ಸರ್ ತಡೆಗಟ್ಟುವ ಗುಣವನ್ನು ಹೊಂದಿದೆ.
ಕೇಸರಿ :
ಕೇಸರಿಯಲ್ಲಿ ಕ್ರೊಸೆಟಿನ್ (Crocetin) ಎಂಬ ಅಂಶವಿರುತ್ತದೆ. ಇದು ಕ್ಯಾನ್ಸರ್ ತಡೆಗಟ್ಟುವುದು ಮಾತ್ರವಲ್ಲ, ಕ್ಯಾನ್ಸರ್ ಗಡ್ಡೆಗಳ ಗಾತ್ರವನ್ನು ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ. ಇದು ತುಂಬಾ ದುಬಾರಿಯಾಗಿದ್ದರೂ ಕ್ಯಾನ್ಸರ್ ಟ್ರೀಟ್ಮೆಂಟ್ ಅಷ್ಟು ದುಬಾರಿಯಲ್ಲ, ಆದ್ದರಿಂದ ಕ್ಯಾನ್ಸರ್ ತಡೆಗಟ್ಟಲು ಕೇಸರಿ ಬಳಸಿ.
ಜೀರಿಗೆ :
ಜೀರಿಗೆಯಲ್ಲಿ Thymoquinone ಎಂಬ ಅಂಶವಿದೆ. ಇದು ಪುರುಷರಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ತುಂಬಾನೇ ಪರಿಣಾಮಕಾರಿಯಾಗಿದೆ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ದೇಹದಿಂದ ಬೇಡದ ಕಶ್ಮಲಗಳನ್ನು ಹೊರಹಾಕಲು ಸಹಕಾರಿ. ಹೀಗಾಗಿ ಕ್ಯಾನ್ಸರ್ ತಡೆಗಟ್ಟುತ್ತದೆ. ಆದ್ದರಿಂದ ಜೀರಿಗೆ ನೀರು ಕುಡಿಯುವುದು ಹಾಗೂ ಅಡುಗೆಯಲ್ಲಿ ಜೀರಿಗೆ ಬಳಸುವುದು ಒಳ್ಳೆಯದು.
ಚಕ್ಕೆ :
ಆಹಾರದ ಸ್ವಾದ ಹೆಚ್ಚಿಸುವ ಚಕ್ಕೆಯಿಂದ ಅನೇಕ ಆರೋಗ್ಯಕರ ಗುಣಗಳಿದೆ. ಇದು ಮೈ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿ, ಅದರ ಜೊತೆಗೆ ಕ್ಯಾನ್ಸರ್ ತಡೆಗಟ್ಟುವ ಗುಣ ಹೊಂದಿದೆ. ಇದು ಶರೀರದಲ್ಲಿ ಹೊಸ ಗಂಟುಗಳು ಉಂಟಾಗುವುದನ್ನು ತಡೆಗಟ್ಟುತ್ತದೆ.ಚಕ್ಕೆಯನ್ನು ಹೇಗೆ ಬಳಸಬೇಕು?
* ದಿನದಲ್ಲಿ ಅರ್ಧ ಚಮಚಕ್ಕಿಂತ ಅಧಿಕ ಚಕ್ಕೆ ಬಳಸಬಾರದು.
* ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ಚಕ್ಕೆ ಪುಡಿ ಹಾಕಿ ಬಳಸಿದರೆ ಒಳ್ಳೆಯದು
* ಅಡುಗೆಯಲ್ಲಿ ಬಳಸಬಹುದು.
ಒರೆಗ್ನೋ :
ನೀವು ಪಿಜ್ಜಾ ಟಾಪಿಂಗ್‌ಗೆ ಬಳಸು ಒರೆಗ್ನೋ ಇದೆಯೆಲ್ಲಾ ಅದು ತುಂಬಾ ಆರೋಗ್ಯಕರ ಗುಣವನ್ನು ಹೊಂದಿದೆ. ಒರೆಗ್ನೋವನ್ನು ನೀವು ಅಡುಗೆ ಮಾಡುವಾಗ ಬಳಸಬಹುದು. ಇದರಲ್ಲಿರುವ ‘Quercetin’ ಇದು ಕ್ಯಾನ್ಸರ್ ಕಣಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಮೆಣಸು :
ನಮ್ಮ ಆಹಾರದಲ್ಲಿ ಮೆಣಸನ್ನು ಹೆಚ್ಚಾಗಿ ಬಳಸುತ್ತೇವೆ ಅಲ್ವಾ? ಕೆಲವು ಕಡೆ ಕಣ್ಣು, ಮೂಗಿನಲ್ಲಿ ನೀರು ಬರಬೇಕು ಅಷ್ಟು ಮೆಣಸಿನಕಾಯಿ ಹಾಕಿ ಅಡುಗೆ ಮಾಡುತ್ತಾರೆ. ಈ ಮೆಣಸು ಲುಕೆಮಿಯಾ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
ಶುಂಠಿ :
ಶುಂಠಿ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಮಾತ್ರವಲ್ಲ ಚಯಪಚಯ ಕ್ರಿಯೆ ಉತ್ತಮ ಪಡಿಸಿ ಕ್ಯಾನ್ಸರ್ ಕಣಗಳನ್ನು ಕೊಲ್ಲುತ್ತದೆ. ನಮ್ಮ ಬಹುತೇಕ ಆಹಾರಗಳಲ್ಲಿ ಶುಂಠಿ ಬಳಸುತ್ತೇವೆ, ಈ ಶುಂಠಿ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಯಾಗಿದೆ.
ಇದರ ಜೊತೆಗೆ ಲವಂಗ, ನಕ್ಷತ್ರ ಮೊಗ್ಗು, ಬೆಳ್ಳುಳ್ಳಿ, ಸಾಸಿವೆ, ಪುದೀನಾ, ರೋಸ್ಮೆರಿ, ವರ್ಜಿನ್ ಆಯಿಲ್, ವಿನೆಗರ್, ಬೆಣ್ಣೆ ಹಣ್ಣು ಇವುಗಳಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಂಶವಿದೆ.ಕ್ಯಾನ್ಸರ್ ತಡೆಗಟ್ಟುವ ಆಹಾರಕ್ರಮಗಳು
* ಆಹಾರದಲ್ಲು ಸೊಪ್ಪು ತರಕಾರಿಗಳನ್ನು ಹೆಚ್ಚಾಗಿ ಬಳಸಬೇಕು. ಹಣ್ಣುಗಳನ್ನು ಸೇವಿಸಿ.
* ಕೆಂಪಕ್ಕಿ ಅನ್ನ ಬಳಸಿ
* ಧಾನ್ಯಗಳನ್ನು ಹೆಚ್ಚಾಗಿ ಬಳಸಿ
* ಒಮೆಗಾ 3 ಕೊಬ್ಬಿನಂಶ ಬಳಸಿ
* ಗಾಣದ ಎಣ್ಣೆ ಬಳಸಿ
* ಸಂಸ್ಕರಿಸಿದ ಆಹಾರ ಬಳಸಬೇಡಿ
* ಉಪ್ಪಿನಂಶದ ಆಹಾರ ಕಡಿಮೆ ಬಳಸಿ.
ಕೊನೆಯದಾಗಿ: ಕ್ಯಾನ್ಸರ್ ಸಮಸ್ಯೆ ಇದ್ದರೆ ನಿಮ್ಮ ಆಹಾರಕ್ರಮ ಹೇಗಿರಬೇಕು ಎಂದು ನಿಮ್ಮ ವೈದ್ಯರ ಬಳಿ ಕೇಳಿ ಅದರಂತೆ ಆಹಾರ ಸೇವಿಸಿ.