ಪ್ರಧಾನಿ ಮೋದಿ ಅವರಿಗೆ ಅಭಿಮಾನಿಗಳು ಅಡಕೆ ಪೇಟ ಹಾಗೂ ಅಡಕೆ ಹಾರವನ್ನು ನೀಡಿ ಸನ್ಮಾನಿಸಲು ಸಜ್ಜಾಗಿದ್ದಾರೆ

ನಿಟ್ಟೂರು : ಗುಬ್ಬಿ ತಾಲೂಕಿನ ನಿಟ್ಟೂರು ಬಳಿ ಬಿದರೆಹಳ್ಳ ಕಾವಲ್ ನಲ್ಲಿ 615 ಎಕರ ಜಾಗದಲ್ಲಿ ನಿರ್ಮಾಣವಾಗಿರುವ ಎಚ್ ಎ ಎಲ್ (HAL) ಘಟಕವನ್ನು ದಿನಾಂಕ 6-2-23 ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ, ಹಾಗೂ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಕೇಂದ್ರ ರಕ್ಷಣಾ ಸಚಿವರು, ಸಹಾಯಕ ರಕ್ಷಣಾ ಸಚಿವರು, ರಾಜ್ಯ ರಕ್ಷಣಾ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರುಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸುಮಾರು 1500 ಕ್ಕೂ ಅಧಿಕ ಮಂದಿ ಗಣ್ಯರು ಆಗಮಿಸಲಿದ್ದಾರೆ, ಸುಮಾರು ಒಂದರಿಂದ ಒಂದೂವರೆ ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ನೀರು, ಪ್ಲಾಸ್ಟಿಕ್ ಬ್ಯಾಗ್ ಯಾವುದೇ ವಸ್ತುಗಳನ್ನು ತರುವಂತಿಲ್ಲ ಎಲ್ಲರಿಗೂ ಕೂಡ ನೀರು, ಊಟದ ವ್ಯವಸ್ಥೆ,ಪಾರ್ಕಿಂಗ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಯಾವುದೇ ರೀತಿಯ ತೊಂದರೆಗಳಾಗದಂತೆ ಪೋಲಿಸ್ ಇಲಾಖೆ ಹಾಗು ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ತಾಲೂಕಿನ ಜನತೆ ಹಾಗೂ ಕೃಷಿಕ ವರ್ಗದ ಪರವಾಗಿ ಅಡಕೆಯಿಂದ ತಯಾರಿಸಿದ ಪೇಟ ಹಾಗೂ ಅಡಕೆ ಹಾರ ನೀಡಲು ಅಭಿಮಾನಿಗಳು ಸಜ್ಜಾಗಿದ್ದಾರೆ , ಅಡಕೆಯನ್ನು ಅಂಟಿಸಿ ಪೇಟ ಸಿದ್ದ ಮಾಡಿದ್ದು ಹಾರ ತಯಾರಿಕೆಗೆ ಉಂಡೆ ಆಡಕೆ ಬಳಸಿ ಸುಂದರವಾಗಿ ಸಿದ್ಧಪಡಿಸಿದ್ದಾರೆ ಹಾಗೆಯೇ ಊಟದ ವ್ಯವಸ್ಥೆ ಕೂಡ ನೂರಾರು ಬಾಣಸಿಗರ ತಂಡ ಸಿಹಿ ಖಾದ್ಯ ಅಡುಗೆ ತಯಾರಿ ನಡೆಸಿದ್ದಾರೆ.