ತುರುವೇಕೆರೆ : ಪ್ರಾಥಮಿಕ ಆರೋಗ್ಯ ಕೇಂದ್ರ ಮಾವಿನಕೆರೆ ವತಿಯಿಂದ ಕುಷ್ಟರೋಗ ನಿವಾರಣಾ ಪಕ್ಷಾಚಾರಣೆ ಕಾರ್ಯಕ್ರಮವನ್ನು ಮಾವಿನಕೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ|| ಬನಶಂಕರಿ, ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ ಎಚ್, ಪ್ರಾ ಆ ಸುರಕ್ಷಣಾಧಿಕಾರಿ ಭಾಗ್ಯಮ್ಮ , ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆ ಉಪಸ್ಥಿತರಿದ್ದರು.
ಕುಷ್ಟರೋಗವು ” ಮೈಕೋ ಬ್ಯಾಕ್ಟಿರಿಯಂ ಲೆಪ್ರೆ ” ಎಂಬ ರೋಗಾಣುವಿನಿಂದ ಬರುವ ಮತ್ತು ತುಂಬಾ ಕಡಿಮೆ ಪ್ರಮಾಣದಲ್ಲಿ ಹರಡುವ ಒಂದು ಸಾಂಕ್ರಾಮಿಕ ರೋಗ.ಈ ರೋಗವು ವಂಶಪಾರಂಪರಿಕವಾಗಿ ಹಾಗೂ ಜನ್ಮತಃ ಬರುವುದಿಲ್ಲ.ಕುಷ್ಟ ರೋಗವು ರೋಗಿಯ ಕಫ ಹಾಗೂ ಉಗುಳಿನ ಮೂಲಕ ಹರಡುತ್ತದೆ,ಈ ರೋಗವು ಯಾವ ವಯಸ್ಸಿನವರಿಗಾದರೂ ಹರಡಬಹುದಾಗಿದೆ.
ಕುಷ್ಠರೋಗದ ಮುಖ್ಯ ಚಿಹ್ನೆಗಳು :
1. ಮಾಸಲು ಬಳಿ ಅಥವಾ ತಾಮ್ರ ಬಣ್ಣದ ಸ್ಪರ್ಶಜ್ಞಾನವಿಲ್ಲದ ಮಚ್ಚೆಗಳು ಯಾವ ಭಾಗದಲ್ಲಾದರೂ ಕಾಣಿಸಬಹುದು.
2. ಕತ್ತಿನ ಪಕ್ಕದಲ್ಲಿ, ಮೊಣಕೈ ಹಾಗೂ ಮೊಣಕಾಅನ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವಿರಬಹುದು.
3. ಹೊಳೆಯುವ ಅಥವಾ ಎಣ್ಣೆಯುಕ್ತ ಮುಖದ ಚರ್ಮ.
4. ಕಣ್ಣಿನ ಉಬ್ಬಿನ ಮೇಲೆ ಕೂದಲು ಉದುರುವುದು.
5. ಕೈ ಕಾಲುಗಳಲ್ಲಿ ಸ್ವರ್ಶಜ್ಞಾನವಿಲ್ಲದಿರುವುದು.
6. ಕೀತ ಅಥವಾ ಬಿಸಿ ವಸ್ತುಗಳನ್ನು ಗ್ರಹಿಸಲು ಅಸಮರ್ಥತೆ,
7. ವಸ್ತುಗಳನ್ನು ಹಿಡಿಯುವಾಗ ಕೈಯಲ್ಲಿ ದೌರ್ಬಲ್ಯ ಅಥವಾ ಅಸಮರ್ಥತೆ / ಬಲಹೀನತೆ,
8. ಶರ್ಬ್ / ಜಾಕೆಟ್ ಇತ್ಯಾದಿ ಬಟನ್‌ಗಳನ್ನು ಹಾಕಿಕೊಳ್ಳುವಾಗ ಅಸಮರ್ಥತೆ / ಬಲಹೀನತೆ,
9. ಕೈಕಾಲು ಜುಮ್ಮೆನಿಸುವಿಕೆ.
10. ಪಾದಗಳಲ್ಲಿ ಹುಣ್ಣು, ನೋವುರಹಿತ ಗಾಯಗಳು.
ಎಲ್ಲಾ ಕುಷ್ಟ ರೋಗಿಗಳನ್ನು ಯಾವ ಹಂತದಲ್ಲಾದರೂ ಚಿಕಿತ್ಸೆಯಿಂದ ಗುಣಪಡಿಸಬಹುದು, ಈ ಚಿಕಿತ್ಸೆಯನ್ನು 6 ತಿಂಗಳು ಮತ್ತು 12 ತಿಂಗಳುಗಳ ವರೆಗೆ ಇರುತ್ತದೆ ಎಂದು ಜಾಗೃತಿ ಮೂಡಿಸಲಾಯಿತು.