ಚೇಳೂರು ಬಳಿ ಅನುಮಾನಾಸ್ಪದವಾಗಿ ಹುಲಿ ಸಾವು

ಗುಬ್ಬಿ : ತಾಲೂಕಿನ ಚೇಳೂರು ಬಳಿ, ಅಂಕಸಂದ್ರ ದಿಂದ ಕುಂಟ ರಾಮನಹಳ್ಳಿಗೆ ಹೋಗುವ ದಾರಿ ಮಧ್ಯದ ಚಿಕ್ಕಹೆಡಗೇಹಳ್ಳಿ ಎಂಬ ಗ್ರಾಮದ ಹತ್ತಿರ ಸೇತುವೆ ಬಳಿ ಇಂದು ಹುಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಕಂಡುಬಂದಿದೆ.

ಸುತ್ತಮುತ್ತಲಿನ ಊರಿನ ಜನರು ಮೃತಪಟ್ಟಿರುವ ಹುಲಿಯನ್ನು ನೋಡಲು ಸ್ಥಳಕ್ಕೆ ಜಮಾಯಿಸಿದ್ದಾರೆ.

ಅನುಮಾನಾಸ್ಪದವಾಗಿ ಮೃತಪಟ್ಟಿರುವ ಹುಲಿಯ ಬಗ್ಗೆ ಇನ್ನೂ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಆಗಮಿಸಿರುವ ಅರಣ್ಯ ಅಧಿಕಾರಿಗಳು ಪರಿಶೀಲನೆ ನೆಡುಸುತ್ತಿದ್ದಾರೆ.

ಇದುವರೆಗೂ ಈ ಸುತ್ತ ಮುತ್ತಲಿನ ಪ್ರದೇಶದಲ್ಲಿ ಹುಲಿ ಕಂಡುಬಂದಿರಲಿಲ್ಲ, ಈಗ ಎಕಾಏಕಿ ಹುಲಿ ಮೃತಪಟ್ಟಿರುವುದನ್ನು ನೋಡಿ ಅರಣ್ಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ವೈದ್ಯರು ಪರಿಶೀಲಿಸಿದ ನಂತರ ಹುಲಿ ಮೃತಪಟ್ಟಿರುವ ಬಗ್ಗೆ ತಿಳಿಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.