ನೇಣು ಬಿಗಿದುಕೊಂಡು ಬೆಸ್ಕಾಂ ನೌಕರ ಆತ್ಮಹತ್ಯೆ ; ಕೊರಟಗೆರೆ

ಕೊರಟಗೆರೆ; ಬೆಸ್ಕಾಂ ನೌಕರನೊರ್ವ ಕೆಇಬಿ ಕ್ವಾಟ್ರಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊರಟಗೆರೆ ‌ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಾಗಭೂಷಣ್(48) ವರ್ಷದ ಬೆಸ್ಕಾಂ‌ ನೌಕರ ನೇಣು ಬಿಗಿದು ಕೊಂಡು ಅತ್ಮಹತ್ಯೆಗೆ ಶರಣಾದ ದುರ್ದೈವಿ.

ಘಟನೆಯ ವಿವರ: ಮೃತಪಟ್ಟ ನೌಕರನು ತಾಲೂಕಿನ ವಡ್ಟಗೆರೆ ಗ್ರಾಪಂಗೆ ಸೇರಿದ ಮಲಪನಹಳ್ಳಿ ಗ್ರಾಮದ ವಾಸಿಯಾಗಿದ್ದು, ಈತನು ಮಗಳ ಹೆರಿಗೆಗಾಗಿ ಹಣ ಹೊಂದಿಸಲು ಸಾಧ್ಯವಾಗದೇ ಬೆಸ್ಕಾಂ ಇಲಾಖೆ ವಸತಿಗೃಹದಲ್ಲಿ ನೇಣು‌ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನು ಡೆತ್ ನೋಟ್ ಸಹ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಸಂಭಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಪ್ರದೀಪ್ ಸಿಂಗ್, ಎಎಸ್ಐ ಯೋಗೀಶ್ ಮುಖ್ಯ ಪೇದೆಗಳಾದ ಸಂಜೀವ್, ರಂಗರಾಜು,ಜಯಪ್ರಕಾಶ್, ಪೇದೆ ಧರ್ಮಪಾಲ್ ನಾಯಕ್ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.