ಗುತ್ತಿಗೆ ಆರೋಗ್ಯ ಕಾರ್ಯಕರ್ತರ ಮುಷ್ಕರ ; ಆರೋಗ್ಯ ಸೇವೆಗಳ ಮೇಲೆ ಭಾರಿ ಪರಿಣಾಮ

ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ನೇಮಕಗೊಂಡಿರುವ ಗುತ್ತಿಗೆ ಆರೋಗ್ಯ ಸಿಬ್ಬಂದಿ ಉದ್ಯೋಗ ಖಾಯಂಗೂಳಿಸಲು ಮುಷ್ಕರ ಆರಂಭಿಸಿದ್ದಾರೆ.

ಆರೋಗ್ಯ ಸಿಬ್ಬಂದಿಗಳು ಮುಷ್ಕರ ಮಾಡಿರುವುದರಿಂದ ಆರೋಗ್ಯ ಸೇವೆಗಳ ಮೇಲೆ ಭಾರಿ ಪರಿಣಾಮ ಬೀರಿದೆ,, ಹಾಗೂ ಪ್ರತಿ ಗುರುವಾರದಂದು ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುವ ಸಾರ್ವತ್ರಿಕಾ ಮಕ್ಕಳ ಲಸಿಕಾ ಕಾರ್ಯಕ್ರಮಕ್ಕೆ ಹಾಗೂ ಎಲ್ಲಾ ಆರೋಗ್ಯ ಸೇವೆಗಳ ಮೇಲೆ ಅಡಚಣೆ ಉಂಟಾಗಿದೆ.

ಇಲಾಖೆಯು NHM ಅಡಿಯಲ್ಲಿ ನೇಮಕಗೊಂಡಿರುವ ಸುಮಾರು 30,000 ಗುತ್ತಿಗೆ ಸಿಬ್ಬಂದಿಯನ್ನು ಹೊಂದಿದೆ, ಗುತ್ತಿಗೆ ನೌಕರರ ಹಾಗೂ ಖಾಯಂ ನೌಕರರ ಕೆಲಸ ಒಂದೇ ಆಗಿದ್ದರೂ ಸಿಬ್ಬಂದಿಯ ವೇತನದಲ್ಲಿ ಸಾಕಷ್ಟು ವ್ಯತ್ಯಾಸವಿದೆ.

ರಾಜ್ಯ ಸರ್ಕಾರವು17 ನೇ ತಾರೀಕಿನಂದು ಮಂಡನೆ ಆಗುವ ಬಜೆಟ್ ನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿ ಅಧಿಕೃತವಾಗಿ ಆದೇಶ ಹೊರಡಿಸಿದ್ದಲ್ಲಿ ಮಾತ್ರ ಪ್ರತಿಭಟನೆಯನ್ನು ಕೈಬಿಡುವುದಾಗಿ ಸಂಘದ ಅಧ್ಯಕ್ಷರಾದ ಕುಮಾರ್ ಎಸ್ ಅವರು ತಿಳಿಸಿದರು.