ರಾಮದೇವರ ಬೆಟ್ಟ ; ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ

ಶ್ರೀ ರಾಮದೇವರಬೆಟ್ಟದಲ್ಲಿ ನೆಲೆಸಿರುವ ಶ್ರೀ ರಾಮೇಶ್ವರ ಸ್ವಾಮಿಯವರಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ಮಹಾರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು.

ಸಂಪೂರ್ಣ ಅರಣ್ಯ ಪ್ರದೇಶದಿಂದ ಅವ್ರುತವಾಗಿರುವ ಪ್ರಶಾಂತ ವಾತಾವರಣದಲ್ಲಿ ನೆಲೆಸಿರುವ ಶ್ರೀ ರಾಮೇಶ್ವರಸ್ವಾಮಿಯವರಿಗೆ ಮಹಾರುದ್ರಭಿಷೇಕ ಹಾಗೂ ವಿಶೇಷ ಪೂಜೆಯನ್ನು ಮಂಚಲಧೊರೆಯ ಮಂಜುನಾಥ ಸ್ವಾಮಿಯರವರು ನಡೆಸಿಕೊಟ್ಟರು.

ಭಕ್ತಾದಿಗಳ ತಂಡವು ಪೂಜಾಸಾಮಾಗ್ರಿಗಳನ್ನು ಹಾಗೂ ಅಡುಗೆಗೆ ಬೇಕಾದ ಪದಾರ್ಥಗಳನ್ನು ಬೆಟ್ಟದ ಮೇಲಕ್ಕೆ ಸಾಗಿಸಿದರು.

ಶ್ರೀ ರಾಮೇಶ್ವರ ಸ್ವಾಮಿಯವರಿಗೆ ಮಹಾರುದ್ರಾಭಿಷೇಕದ ನಂತರ ವಿಶೇಷ ಪೂಜೆಯನ್ನು ನೆರವೀರಿಸಿ ಅಲಂಕಾರವನ್ನು ಮಾಡಲಾಗಿತ್ತು, ಭಕ್ತಾದಿಗಳ ಸಮೂಹವು ಸ್ವಾಮಿಯವರ ದರ್ಶನ ಪಡೆದು ಕೃಪೆ ಗೆ ಭಾಗಿಯಾದರು, ನಂತರ ಪ್ರಸಾದವನ್ನು ಸೇವನೆ ಮಾಡಿದರು.

ಪ್ರತಿ ವರ್ಷಕ್ಕಿಂತ ಈ ವರ್ಷ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.