ಗುಬ್ಬಿ : ತಾಲೂಕಿನ ನಿಟ್ಟೂರು ಬಳಿ HAL ಘಟಕವು ಉದ್ಘಾಟನೆಗೊಂಡಿರುವ ಹಿನ್ನೆಲೆಯಲ್ಲಿ, ಕೆಲ ವಂಚಕರು ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಕೂಡಲೇ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ.
ಘಟಕಕ್ಕೆ ITI, Diplamo ಆಗಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ ಸ್ಥಳೀಯರು ನಿಮ್ಮ ಅಕ್ಕ ಪಕ್ಕದವರಿಗೂ ತಿಳಿಸಿ, ನಮ್ಮವರು ಪ್ರಯತ್ನ ಪಡದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ ಆಗ ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ ಆದಕಾರಣ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದು ವಾಟ್ಸಾಪ್, ಫೇಸ್ ಬುಕ್ ಮೂಲಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ.
ವ್ಯವಸ್ಥಾಪಕ ಶಿವಕುಮಾರ್ ಎಂಬ ಹೆಸರು ಸೇರಿ ಇನ್ನಿತರ ಹೆಸರನ್ನು ಉಪಯೋಗಿಸಿಕೊಂಡು ಒಂದೆರಡು ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದಾರೆ, ಇಂತಹ ಸಂದೇಶಗಳನ್ನು ನಂಬಿ ಉದ್ಯೋಗ ಆಕಾಂಕ್ಷಿಗಳು ವಂಚಿತರಾಗಬಾರದು ಎಂದು ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮನವಿ ಮಾಡಿದ್ದಾರೆ.