ಬೆಂಗಳೂರು : ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಅಡಿಯಲ್ಲಿ ನೇಮಕಗೊಂಡಿರುವ ಗುತ್ತಿಗೆ ಆರೋಗ್ಯ ಸಿಬ್ಬಂದಿಗಳ ಉದ್ಯೋಗ ಖಾಯಂಗೂಳಿಸಲು ಮುಷ್ಕರ ಆರಂಭಿಸಿ ಇಂದಿಗೆ 9 ದಿವಸಗಳು ಕಳೆದರೂ ಅರೋಗ್ಯ ಸಚಿವರಾದ Dr K ಸುಧಾಕರ್ ಹಾಗೂ ಸರ್ಕಾರದ ವತಿಯಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ಸತತವಾಗಿ 9 ದಿನದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕೂತು ಮುಷ್ಕರ ಮಾಡುತ್ತಿದ್ದರು ಸಹ ಅರೋಗ್ಯ ಸಚಿವರು ಸ್ಥಳಕ್ಕ ಆಗಮಿಸದೆ ಇರುವುದು ನೌಕರರ ಬೇಸರಕ್ಕೆ ಕಾರಣವಾಗಿದೆ, ಸರ್ಕಾರದವರು ಕೂಡ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ದುಃಖದಿಂದ ತಮ್ಮ ಅಳಲನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡು ನಮಗೆ ಸಹಾಯ ಮಾಡಬೇಕೆಂದು ಗುತ್ತಿಗೆ ನೌಕರರು ಹಾಗೂ ಸಂಘದ ಅಧ್ಯಕ್ಷರುಗಳು ವಿನಂತಿಸಿದ್ದಾರೆ.