ಗುಬ್ಬಿಯಲ್ಲಿ ಶಾಸಕರು ಕೊಟ್ಟ ಕುಕ್ಕರ್ ಬ್ಲಾಸ್ಟ್ ಆಗುತ್ತಿವೆ ; ಬಿ ಎಸ್ ನಾಗರಾಜು ಆರೋಪ

ಗುಬ್ಬಿ : ಕ್ಷೇತ್ರದ ಶಾಸಕರಾದ ಎಸ್ ಆರ್ ಶ್ರೀನಿವಾಸ್ ಹಂಚುತ್ತಿದ್ದ ಕುಕ್ಕರ್’ಗಳು ಬ್ಲಾಸ್ಟ್ ಆಗುತ್ತಿವೆ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಎಸ್. ನಾಗರಾಜು ಆರೋಪಿಸಿದ್ದಾರೆ.

ಗುಬ್ಬಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿ ಎಸ್ ನಾಗರಾಜ ಅವರು ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಮೇಲೆ ನೇರ ಆರೋಪ ಮಾಡಿದ್ದಾರೆ, ಈಗಾಗಲೇ ಹಂಚುತ್ತಿರುವ ಕುಕ್ಕರ್ ‘ಗಳು ಸೇಫ್ಟಿ ಹೋಲ್ ಸಿಡಿದು ಕೆಲವೆಡೆ ಅನಾಹುತಗಳು ಸಂಭವಿಸಿದೆ, ನಕಲಿ ISI ಮುದ್ರೆಯಿರುವ 150-200 ರೂಗಳ ಕುಕ್ಕರ್ ಗಳನ್ನು ಕೊಟ್ಟು ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ, ಅದರ ಬದಲಾಗಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿ ಎಂದು ಹೇಳಿದ್ದಾರೆ.

ನಗರದಲ್ಲಿ ಮಾರ್ಚ್ 25 ರಂದು ಬೃಹತ್ ಉದ್ಯೋಗಮೇಳವನ್ನು ಆಯೋಜಿಸಿದ್ದೇವೆ, ಸುಮಾರು 60 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಲಿವೆ, ಇದರಿಂದ ತಾಲ್ಲೋಕಿನಲ್ಲಿರುವ ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.