ಕೊರಟಗೆರೆ ; ವಕೀಲರ ಮನೆಯಲ್ಲಿ ಖತರ್ನಾಕ್ ಕಳ್ಳರ ಕೈಚಳಕ

ಕೊರಟಗೆರೆ : ಪಟ್ಟಣದ ವಿನಾಯಕ ನಗರದಲ್ಲಿ ವಾಸವಾಗಿರುವ ವಕೀಲ ದೇವರಾಜ್ ಅವರ ಮನೆಯಲ್ಲಿ ಕಳ್ಳತನವಾಗಿದೆ.

ವಕೀಲ ದೇವರಾಜ್ ಅವರ ಕುಟುಂಬದವರು ಚಿಕ್ಕಮಗಳೂರಿಗೆ ಹೋಗಿರುವ ಹಿನ್ನೆಲೆಯಲ್ಲಿ , ಶುಕ್ರವಾರ ಮಧ್ಯರಾತ್ರಿ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಕಬ್ಬಿಣದ ರಾಡಿನ ಸಹಾಯದಿಂದ ಬಾಗಿಲನ್ನು ಒಡೆದು ಒಳನುಸುಳಿ ರೂಮಿನಲ್ಲಿದ್ದ ಬೀರನ್ನು ಹೊಡೆದು ನಗದು ಚಿನ್ನಾಭರಣವನ್ನು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸಿಪಿಐ ಕೆ ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಶ್ವಾನದಾಳ, ಬೆರಳಚ್ಚು ತಜ್ಞರಿಂದ ಕೂಡ ಪರಿಶೀಲನೆಯನ್ನು ನಡೆಸಲಾಯಿತು.