CEIR ಪೋರ್ಟಲ್ ನಿಂದ ಕಳೆದುಹೋದ ಮೊಬೈಲ್ ಪತ್ತೆ

ತುಮಕೂರು: ಮೊಬೈಲ್ ಫೋನ್ ಅನ್ನು ಕಳೆದುಕೊಂಡ ತಕ್ಷಣವೇ ಸಿ.ಇ.ಐ.ಆರ್ (CEIR) ಪೋರ್ಟಲ್ ಅಲ್ಲಿ ನೊಂದಾಯಿಸಿ.

ಇತ್ತೀಚಿಗಷ್ಟೇ ಕಳೆದುಕೊಂಡ ಮೊಬೈಲ್ CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಸೋಮವಾರದಂದು ತುಮಕೂರುಜಿಲ್ಲಾ ಪೊಲೀಸ್ ಅಧೀಕ್ಷಕರು ಆದಂತ ರಾಹುಲ್ ಕುಮಾರ್ ಶಹಪುರ್ ವಾದ್ ಅವರು ಸದರಿ ಮೊಬೈಲ್ ವಾರಸುದಾರನಿಗೆ ಹಿಂದಿರುಗಿಸಿದರು.

ನಕಲಿ ಮೊಬೈಲ್ ಫೋನ್ ಮಾರುಕಟ್ಟೆಗೆ ಕಡಿವಾಣ ಹಾಕಲು, ಫೋನ್ ಕಳ್ಳತನಕ್ಕೆ ಕಡಿವಾಣ ಹಾಕಲು, ಗ್ರಾಹಕರ ಹಿತಾಸಕ್ತಿ ರಕ್ಷಿಸಲು ಮತ್ತು ಕಾನೂನು ಬದ್ಧ ಪ್ರತಿಬಂಧಕಕ್ಕಾಗಿ ಕಾನೂನು ಸಂಸ್ಥೆಗಳಿಗೆ ಸಹಾಯ ಮಾಡಲು DOT ಸಂಸ್ಥೆಯು CEIR ಪೋರ್ಟಲ್ ಅನ್ನು ಪ್ರಾರಂಭಿಸಿದೆ.

CEIR ಎಲ್ಲಾ ಮೊಬೈಲ್ ಫೋನ್ ಆಪರೇಟರ್‌ಗಳ IMEI ಡೇಟಾಬೇಸ್‌ಗೆ ಸಂಪರ್ಕಗೊಳ್ಳುತ್ತದೆ ಮತ್ತು ಕಪ್ಪು ಪಟ್ಟಿಯಲ್ಲಿರುವ ಮೊಬೈಲ್ ಸಾಧನಗಳನ್ನು ಹಂಚಿಕೊಳ್ಳಲು ಎಲ್ಲಾ ನೆಟ್‌ವರ್ಕ್ ಆಪರೇಟರ್‌ಗಳಿಗೆ ಕೇಂದ್ರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ, ಸಾಧನದಲ್ಲಿನ ಸಬ್‌ಸ್ಕ್ರೈಬರ್ ಐಡೆಂಟಿಟಿ ಮಾಡ್ಯೂಲ್ (SIM) ಅನ್ನು ಬದಲಾಯಿಸಿದ್ದರೂ ಸಹ ಒಂದು ನೆಟ್‌ವರ್ಕ್‌ನಲ್ಲಿ ಕಪ್ಪುಪಟ್ಟಿಗೆ ಸೇರಿಸಿದರೆ ಸಾಧನವು ಇತರ ನೆಟ್‌ವರ್ಕ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ.