ಗುತ್ತಿಗೆ ಅರೋಗ್ಯ ಸಿಬ್ಬಂದಿಗಳನ್ನು ಸಂಕಷ್ಟಕ್ಕೆ ದೂಕುತ್ತಿರುವ ಸರ್ಕಾರ

ಬೆಂಗಳೂರು : ಮುಷ್ಕರ ಆರಂಭಿಸಿ ಸತತವಾಗಿ ಇಂದಿಗೆ 16 ದಿನಗಳು ಕಳೆದರೂ ಸರ್ಕಾರದವರ ಕಣ್ಣಿಗೆ ಕಾಣದ ಗುತ್ತಿಗೆ ಅರೋಗ್ಯ ಸಿಬ್ಬಂದಿಗಳು.

NHM ಅಡಿಯಲ್ಲಿ ನೇಮಕಾಗೊಂಡ ಗುತ್ತಿಗೆ ಅರೋಗ್ಯ ಸಿಬ್ಬಂದಿಗಳು ಉದ್ಯೋಗವನ್ನು ಖಾಯಂಗೊಳಿಸಲು ಮುಷ್ಕರ ಆರಂಭಿಸಿ 16 ದಿನಗಳಾದರೂ ಸಹ ಸರ್ಕಾರದವರು ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಅಂದು ಮಹಾಮಾರಿ ಕೊರೋನ ಬಂದಂತಹ ಸಮಯದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅವರ ಕುಟುಂಬದವರನ್ನೆಲ್ಲ ಬಿಟ್ಟು ಬೀದಿಗಿಳಿದು ಸಾರ್ವಜನಿಕರ ರಕ್ಷಣೆಗಾಗಿ ಹೋರಾಡಿದ ಅರೋಗ್ಯ ಕಾರ್ಯಕರ್ತರು ಇಂದು ಅದೇ ಬೀದಿಯಲ್ಲಿ ಸತತವಾಗಿ 16 ದಿನಗಳಿಂದ ಕೂತಿದ್ದರೂ ಸಹ ಸರ್ಕಾರದವರು ನೋಡಿಯೂ ನೋಡದ ಹಾಗೆ ಕಣ್ಣುಮುಂಚ್ಚಿಕೊಂಡಿದ್ದಾರೆ. ಇದರಿಂದಾಗಿ ನಾವು ಮತ್ತೆ ನಮ್ಮ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಗುತ್ತಿಗೆ ಅರೋಗ್ಯ ಸಿಬ್ಬಂದಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ.