ತುಮಕೂರು: ಬೆಳಗ್ಗೆ ಎದ್ದು ನರಿ ಮುಖವನ್ನು ನೋಡಿದರೆ ಅದೃಷ್ಟ ಬರುತ್ತದೆ ಎಂದು ನರಿಯನ್ನು ಸಾಕಿದ್ದ ವ್ಯಕ್ತಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮದ ನಿವಾಸಿ ಲಕ್ಷ್ಮಿಕಾಂತ್ ಎನ್ನುವ ವ್ಯಕ್ತಿಗೆ ಸುಮಾರು 7ತಿಂಗಳ ಹಿಂದೆ ನರಿ ಮರಿಗಳು ಸಿಕ್ಕಿದ್ದು ಅದರಲ್ಲಿ ಒಂದನ್ನು ತಂದು ತನ್ನ ಕೋಳಿ ಫಾರಂನಲ್ಲಿ ಸಾಕಿರುತ್ತಾನೆ ಕಾರಣ ಬೆಳಗ್ಗೆ ಎದ್ದು ನರಿ ಮುಖ ನೋಡಿದರ ಅದೃಷ್ಟ ಬರುತ್ತದೆ ಎಂಬ ಮೂಢನಂಬಿಕೆ. ಆತ ಪ್ರತಿ ದಿನ ಮುಂಜಾನೆ ಎದ್ದು ನರಿ ಮುಖವನ್ನು ನೋಡಿ ಅಂದಿನ ಕೆಲಸಗಳನ್ನು ಪ್ರಾರಂಭ ಮಾಡುತ್ತಿದ್ದ ಆದರೆ ಈಗ ಅದೇ ನರಿಯಿಂದ ಬಂದಾನಕ್ಕೋಳಗಾಗಿದ್ದಾನೆ. ವನ್ಯಮೃಗಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಂಡ ಆರೋಪದ ಮೇರೆಗೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಧಿಕಾರಿಗಳ ಬಳಿ ಆರೋಪಿ ಲಕ್ಷ್ಮಿಕಾಂತ್ ಮೂಡನಂಬಿಕೆಯಿಂದ ಈ ರೀತಿ ಮಾಡಿದ್ದೇನೆ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಹೇಳಿದ್ದಾನೆ. ಪ್ರಕರಣ ದಾಖಲಿಸಿದ ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ನ್ಯಾಯಾಲಯವು ನರಿಯ ಸುರಕ್ಷತೆ ಮತ್ತು ಸಂರಕ್ಷಣೆಯ ಸಲುವಾಗಿ ಕಾಡಿಗೆ ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಿರುತ್ತದೆ.