ಇತಿಹಾಸ ಪ್ರಸಿದ್ಧ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಗುಬ್ಬಿ : ಇತಿಹಾಸ ಪ್ರಸಿದ್ಧ ಗುಬ್ಬಿಯ ಒಡೆಯ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವವು ಅದ್ದೂರಿಯಿಂದ ಜರುಗಿತು.

ಯಡೆಯೂರು ಸಿದ್ದಲಿಂಗೇಶ್ವರರ ಗುರುಗಳಾದ ಗೋಸಲ ಶ್ರೀ ಚನ್ನಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ದಿನಾಂಕ 25/2/23 ನೇ ಶನಿವಾರದಂದು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟನೆಗೊಂಡಿತು , ಇಂದು ರಾಥೋತ್ಸವವು ವಿಜೃಂಭಣೆಯಿಂದ ಜರುಗಿತು.

ಇಂದು ಸ್ವಾಮಿಯವರ ರಾಥೋತ್ಸವದ ಪ್ರಯುಕ್ತ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿರಂತರ ಮಹಾದಾಸೋಹವನ್ನು ಏರ್ಪಡಿಸಲಾಗಿದೆ.

ದಿನಾಂಕ 3-3-23 ರ ಶುಕ್ರವಾರ ರಾತ್ರಿ 7:30 ಕ್ಕೆ ಗುಬ್ಬಿಯಪ್ಪ ಕಲಾಸಂಘದವರಿಂದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಹಾಗೂ 7/3 ಮಂಗಳವಾರದಂದು ಬೆಳ್ಳಿ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನೆಡೆಯಲಿದೆ.

ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮಿಗಳು ಸ್ವಾಮಿಯವರ ರಾಥೋತ್ಸವದಲ್ಲಿ ಭಾಗಿಯಾಗಿದ್ದರು, ಲೋಕಸಭಾ ಸದಸ್ಯರಾದ ಜಿ.ಎಸ್ ಬಸವರಾಜು , ಬಿ ಜೆ ಪಿ ಪಕ್ಷದ ಎಸ್ ಡಿ ದಿಲೀಪ್ ಕುಮಾರ್ ಮತ್ತು ಮುಖಂಡರುಗಳು, ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.