ಕಳೆದು ಹೋದ ಮೊಬೈಲ್ ಪತ್ತೆ ; ಸಿ ಇ ಎನ್ ಪೋಲೀಸ್ ತುಮಕೂರು

ತುಮಕೂರು : ನಗರದ ಶಿರಾ ಗೇಟ್ ಬಳಿ ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿಗೆ ಇಂದು ಸೈಬರ್ ಎಕನಾಮಿಕ್ ನೋರ್ಕಟಿಕ್ಸ್ ಪೋಲೀಸರು ಮೊಬೈಲ್ ಅನ್ನು ಪತ್ತೆ ಹಚ್ಚಿ ಹಿಂದಿರುಗಿಸಿದ್ದಾರೆ.

ಮೊಬೈಲ್ ಕಳೆದುಕೊಂಡಿದ್ದ ವ್ಯಕ್ತಿಯು ದಿನಾಂಕ 28/02/23 ರಂದು CEIR ಪೋರ್ಟಲ್ ನಲ್ಲಿ ನೋಂದಾಯಿಸಿದ್ದರು, ಸಿ. ಇ. ಎನ್ ಪೊಲೀಸ್ ಠಾಣೆ ತುಮಕೂರು ರವರು ಕಳೆದು ಹೋಗಿದ್ದ ಮೊಬೈಲ್ ಅನ್ನು ಪತ್ತೆ ಮಾಡಿ ಮೊಬೈಲ್ ವಾರಸುದಾರನಿಗೆ ಇಂದು 2/3/23 ರ ಸಂಜೆ ಸಿ. ಇ. ಎನ್ ಪೋಲೀಸ್ ಠಾಣೆ ಇನ್ಸ್ಪೆಕ್ಟರ್ ಆದ ಅವಿನಾಶ್. ವಿ ಅವರು ಹಿಂದಿರುಗಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹಾಗೂ ನಕಲಿ ಫೋನ್ ಮಾರುಕಟ್ಟೆಗೆ ಕಡಿವಾಡ ಹಾಕಲು, ಗ್ರಾಹಕರ ಹಿತಾಸಕ್ತಿ ಕಾಪಾಡಲು ಕಾನೂನು ಸಂಸ್ಥೆಗಳಿಗೆ ಉಪಯೋಗವಾಗಲು ತಜ್ಞರ ತಂಡವು CEIR ಪೋರ್ಟಲ್ ಅನ್ನು ಪ್ರಾರಂಬಿಸಿದ್ದು, ಇದರಿಂದ ಕಳೆದುಕೊಂಡ ಮೊಬೈಲ್ ಗಳನ್ನು ಪತ್ತೆಹಚ್ಚಲು ಬಹಳ ಸುಲಭವಾಗಿದೆ.

ಮೊಬೈಲ್ ಕಳೆದುಕೊಂಡವರು CEIR ಪೋರ್ಟಲ್ ಮುಖಾಂತರ ನೋಂದಾಯಿಸಿದ್ದರೆ ಬಹುತೇಕ ಮೊಬೈಲ್ ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆ ತುಮಕೂರು ಇವರು ಹುಡುಕಿಕೊಡುತ್ತಿದ್ದಾರೆ.