ನಾಳೆ ತುಮಕೂರು ಸ್ಮಾರ್ಟ್ ಸಿಟಿಯ ಹಲವು ಯೋಜನೆಗಳ ಲೋಕಾರ್ಪಣೆ ; ಸಿ ಎಂ ಬೊಮ್ಮಾಯಿ

ತುಮಕೂರು : ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರಿದ್ದ ತುಮಕೂರಿನಲ್ಲಿ ಈಗ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಜನತೆಗೆ ಸಮರ್ಪಣೆ ಮಾಡಲಿದ್ದಾರೆ.

ಮಹಾತ್ಮಗಾಂಧಿ ಕ್ರೀಡಾಂಗಣ, ಗ್ರಂಥಾಲಯ, ಸರ್ಕಾರಿ ಆಸ್ಪತ್ರೆಯ ಟ್ರಾಮಕೇರ್ ಸೆಂಟರ್, ಕಮಾಂಡ್ ಸೆಂಟರ್ ಹಾಗೂ ಇತರೆ ಕಾಮಗಾರಿಗಳು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಬಿಡುಗಡೆಯಾದಂತಹ ಅನುದಾನದಲ್ಲಿ ನಿರ್ಮಾಣವಾಗಿವೆ ಈ ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ 5 /2023 ರಂದು ಆಗಮಿಸಿ ಮಧ್ಯಾಹ್ನ 1:30 ಗಂಟೆಗೆ ಉದ್ಘಾಟನೆ ಮಾಡಲಾಗುತ್ತದೆ.

ಈ ಉದ್ಘಾಟನೆಯ ಸಮಾರಂಬದ ಅಧ್ಯಕ್ಷತೆಯನ್ನು ತುಮಕೂರು ನಗರದ ಶಾಸಕ ಜಿ.ಬಿ. ಜ್ಯೋತಿಗಣೇಶ್ ವಹಿಸಿಕೊಂಡಿದ್ದಾರೆ, ಕಾರ್ಯಕ್ರಮಕ್ಕೆ ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಬಿ ಸಿ ನಾಗೇಶ್, ಡಾ ಕೆ ಸುಧಾಕರ್ ಸೇರಿದಂತೆ ಇತರ ಸಚಿವರುಗಳು ಹಾಗೂ ಸದಸ್ಯರುಗಳು ಭಾಗವಹಿಸುತ್ತಿದ್ದಾರೆ.