NHM ನೌಕರರ ಸಂಬಳ ಶೇ.15ರಷ್ಟು ಏರಿಕೆ ; ಏಪ್ರಿಲ್ 1ರಿಂದ ಜಾರಿ

ಬೆಂಗಳೂರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆ ನೌಕರರ ಸಂಭಾವನೆಯನ್ನು ಶೇ.15 ರಷ್ಟು ಹೆಚ್ಚಿಸಿದ್ದಾರೆ ಈ ಆದೇಶವು ಏಪ್ರಿಲ್ 1 ರಿಂದ ಅನ್ವಯವಾಗಲಿದೆ.

NHM ಗುತ್ತಿಗೆ ನೌಕರರು ಕೆಲಸವನ್ನು ಖಾಯಂಗೊಳಿಸಲು ಅನಿರ್ಧಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿ ಈಗಾಗಲೇ 20 ದಿನಗಳು ಕಳೆದರೂ ಸಹ ಸರ್ಕಾರದ ವತಿಯಿಂದ ಯಾವುದೇ ಪ್ರತಿ ಕ್ರಿಯೆ ದೊರಕುತ್ತಿರಲಿಲ್ಲ ಆದರೆ ಇದೀಗ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ|ಕೆ ಸುಧಾಕರ್ ಸರ್ಕಾರದ ಮಟ್ಟದಲ್ಲಿ ಚರ್ಚೆ ನೆಡೆಸಿ NHM ಗುತ್ತಿಗೆ ನೌಕರರ ಸಿಬ್ಬಂದಿಗಳ ವೇತನವನ್ನು ಹೆಚ್ಚಳ ಮಾಡಲು ನಿರ್ಧಾರಿಸಿದ್ದಾರೆ.

ಕೆಲಸಕ್ಕೆ ಸೇರ್ಪಡೆಯಾಗುವ ಸಂದರ್ಭದಲ್ಲಿ 20 ಸಾವಿರ ರೂ ಗಿಂತ ಕಡಿಮೆ ಸಂಬಳ ಇದ್ದವರಿಗೆ ಶೇ 15 ರಷ್ಟು ಹೆಚ್ಚಳವಾಗಲಿದೆ.

5 ವರ್ಷಕ್ಕಿಂತ ಹೆಚ್ಚು ಸಮಯದ ಕಾಲ ಕೆಲಸ ಮಾಡಿದ MBBS, AYUSH, RBSK ಇತ್ಯಾದಿ NHM ಆಫೀಸರ್ ಗಳಿಗೆ ಶೇ 15 ಹೆಚ್ಚಳವಾಗಿದೆ.

ಗುತ್ತಿಗೆ ಆಧಾರಿತ ಸ್ಪೆಷಲಿಸ್ಟ್ ಗಳಿಗೆ

  • 3-5 ವರ್ಷ ಕೆಲಸ ಮಾಡಿದವರಿಗೆ ಶೇ 5 ಹೆಚ್ಚಳವಾಗಲಿದೆ.
  • 5-10 ವರ್ಷ ಕೆಲಸ ಮಾಡಿದವರಿಗೆ ಶೇ 10 ಹೆಚ್ಚಳವಾಗಲಿದೆ.
  • 10 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದವರಿಗೆ ಶೇ 15 ರಷ್ಟು ಹೆಚ್ಚಳವಾಗಲಿದೆ.

ಈ ಹಿಂದೆ ವೇತನವನ್ನು ಹೆಚ್ಚಳ ಮಾಡಲು ಆಗ್ರಹಿಸಿದ್ದಾಗ ನೌಕರರಿಗೆ ಮಾತು ಕೊಟ್ಟ ಹಾಗೆ ಕೆಲಸ ನಿರ್ವಹಿಸಿದ್ದೇವೆ ಹಾಗೂ ನಮ್ಮ ಸರ್ಕಾರವು ನಮ್ಮ ನೌಕರರ ಕ್ಷೇಮದ ಬದುಕಿಗೆ ಸದಾ ಶ್ರಮಿಸುತ್ತದೆ ಎಂದು ಅರೋಗ್ಯ ಸಚಿವ ಡಾ | ಕೆ ಸುಧಾಕರ್ ಹೇಳಿದ್ದಾರೆ.