ಮಧ್ಯ ಸೇವನೆಯಿಂದ ಆಸ್ಪತ್ರೆಯಲ್ಲೇ ಮಲಗಿದ ವೈದ್ಯ : ಸರ್ಕಾರಿ ಆಸ್ಪತ್ರೆ ತಿಪಟೂರು

ತಿಪಟೂರು : ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗ ಪಾನಮತ್ತರಾಗಿ ಮಲಗಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸೋಮವಾರ ರೋಗಿಗಳು ಚಿಕಿತ್ಸೆಗಾಗಿ ಹೊರಗಡೆ ಕಾಯುತ್ತಿರುವಾಗ ದಂತ ವಿಭಾಗದ ಡಾ.ಜಯಪ್ರಕಾಶ್ ಮಧ್ಯ ಸೇವಿಸಿ ಕುರ್ಚಿಯಲ್ಲೇ ಮಲಗಿದ್ದರು.

ಚಿಕಿತ್ಸೆಗಾಗಿ ಬಂದ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಮಾತನಾಡಿಸಲು ಯತ್ನಿಸಿದಾಗ ಎಲ್ಲರನ್ನು ಹೊರ ಹೋಗಲು ಹೇಳಿದ್ದಾರೆ, ಚಿಕಿತ್ಸೆಗಾಗಿ ಬಂದವರು ದೃಶ್ಯವನ್ನು ಸೆರೆಮಾಡಿ ಹರಿಬಿಟ್ಟಿದ್ದಾರೆ.

ಡಾ. ಜಯಪ್ರಕಾಶ್ ಈ ಮೊದಲು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಅಲ್ಲೂ ಸಹ ಮಧ್ಯ ಸೇವಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದರು, ನಂತರ ಒಂದು ವರ್ಷದ ಹಿಂದೆ ತಿಪಟೂರಿಗೆ ವರ್ಗಾವಣೆಗೊಂಡಿದ್ದರು. ಇಲ್ಲೂ ಸಹ ಅವರ ವರ್ತನೆಯನ್ನು ಗಮನಿಸಿ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಡಿ.ಎಚ್.ಒ ಮಂಜುನಾಥ್ ಅವರು ತನಿಖೆ ನೆಡೆಸಿ ಕ್ರಮ ತಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ