ನಿಮ್ಮ ಮೊಬೈಲ್ ನಿಂದ ಮಿಸ್ ಕಾಲ್ ಕೊಟ್ಟು PF ಬ್ಯಾಲೆನ್ಸ್ ತಿಳಿಯಿರಿ

ನಿಮ್ಮ ಮೊಬೈಲ್ ಫೋನ್ ನಿಂದ ಮಿಸ್ಡ್ ಕಾಲ್ ಕೊಟ್ಟು ನಿಮ್ಮ ಪಿ.ಎಫ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಈಗ ಬಹಳ ಸುಲಭವಾಗಿ ತಿಳಿಯಬಹುದು.

Employee provident Fund (EPFO) ಇದು ಉದ್ಯೋಗಿಗಳ ಜೀವನದ ಭದ್ರತೆಗೆಂದು ರೂಪಿಸಲಾಗಿರುವ ಯೋಜನೆ, ಮುಂಚಿನ ದಿನಗಳಲ್ಲಿ PF ಖಾತೆಯಲ್ಲಿ ಇರುವ ಬ್ಯಾಲೆನ್ಸ್ ಅನ್ನು ಚೆಕ್ ಮಾಡಲು ಉಮಾಂಗ್ ಆಪ್ ಅಥವಾ EPFO ವೆಬ್ ಸೈಟ್ ಗೆ ಹೋಗಿ ಬ್ಯಾಲೆನ್ಸ್ ಅನ್ನು ನೋಡಬೇಕಾಗಿತ್ತು ಅದಕ್ಕೆ ಸಮಯ ತೆಗೆದುಕೊಳ್ಳುತಿತ್ತು, ಆದರೆ ಇದೀಗ EPFO ಸಂಸ್ಥೆಯವರು ಉದ್ಯೋಗಿಗಳಿಗೆ ಸಹಾಯವಗಲೆಂದು ಮಿಸ್ಡ್ ಕಾಲ್ ಸೇವೆಯೊಂದನ್ನು ರೂಪುಗೊಳಿಸಿದ್ದಾರೆ.

UAN ಪೋರ್ಟಲ್ ಅಲ್ಲಿ ನೋಂದಾಯಿಸಿದವರು ತಮ್ಮ ನೊಂದಾಯಿತ ಮೊಬೈಲ್ ನಂಬರ್ ಇಂದ 9966044425 ಈ ನಂಬರ್ ಗೆ ಮಿಸ್ ಕಾಲ್ ಕೊಟ್ಟರೆ ನಿಮ್ಮ PF ಖಾತೆಯಲ್ಲಿ ಇರುವ ಹಣದ ಮೊತ್ತ ನಿಮ್ಮ ನೊಂದಾಯಿತ ಮೊಬೈಲ್ ಗೆ SMS ಮೂಲಕ ಮಾಹಿತಿ ಬರುತ್ತದೆ.