ಮದನಘಟ್ಟ : ಗುಬ್ಬಿ ತಾಲ್ಲೊಕಿನ ನಿಟ್ಟೂರು ಹೋಬಳಿಯ ಮದನಘಟ್ಟ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಈ ಬಾರಿ ಬಹಳ ಸರಳದಿಂದ ಜರುಗಲಿದೆ.
ಇಂದು 13/3/23 ರ ಬೆಳಗ್ಗೆ ಗಂಗಾಪೂಜೆ ಮಾಡುವುದರ ಮೂಲಕ ಸ್ವಾಮಿಯವರ ಜಾತ್ರಾ ಮಹೋತ್ಸವವನ್ನು ಪ್ರಾರಂಭ ಮಾಡಲಾಗುವುದು, ಕುಂಭ, ಲಿಂಗದವೀರರ ಕುಣಿತ ,ನಂದಿಧ್ವಜ ಸಮೇತ ಸ್ವಾಮಿಯವರ ಉತ್ಸವವು ಜರುಗುವುದು ನಂತರ ಸ್ವಾಮಿಯವರಿಗೆ ಮಹಾ ಮಂಗಳಾರತಿ ನೆರೆವೇರಿಸಿ ರಾತ್ರಿ 8 ಗಂಟೆಗೆ ಮಹಾದಾಸೋಹವನ್ನು ಏರ್ಪಡಿಸಲಾಗಿದೆ.
ಪ್ರತಿ ಬಾರಿಯೂ ಬಹಳ ವಿಜೃಂಭಣೆಯಿಂದ ನೆಡೆಯುತ್ತಿದ್ದ ಶ್ರೀ ಬಸವೇಶ್ವರ ಸ್ವಾಮಿಯ ಜಾತ್ರ ಮಹೋತ್ಸವವು ಈ ಬಾರಿ ಬಹಳ ಸರಳದಿಂದ ಜರುಗುತ್ತಿದೆ, ಕಾರಣ ಶ್ರೀ ಸ್ವಾಮಿಯವರ ವಿಗ್ರಹಗಳನ್ನು ಹೊಸದಾಗಿ ಮಾಡಿಸಿರುವುದರಿಂದ ಸ್ವಾಮಿಯವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಮುಂದಿನ 48 ದಿನಗಳ ವರೆಗೂ ಪ್ರತಿನಿತ್ಯ ದಾಸೋಹವನ್ನು ಏರ್ಪಡಿಸಲಾಗಿರುತ್ತದೆ, ಪ್ರತಿ ದಿನವೂ ಕೂಡ ಭಕ್ತಾದಿಗಳು ಸ್ವಾಮಿಯವರಿಗೆ ಅಭಿಷೇಕವನ್ನು ಮಾಡಿಸಿ ಅನ್ನಸಂತರ್ಪಣೆ ಮಾಡಿಸುತ್ತಾರೆ, 48ನೇ ಕೊನೆಯ ದಿನ ಶ್ರೀ ಬಸವೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ, ಸಿಡಿ ಮದ್ದುಗಳು, ಲಿಂಗದವೀರರು ಹಾಗೂ ನಂದಿಧ್ವಜದ ಮೂಲಕ ಸ್ವಾಮಿಯವರ ಉತ್ಸವವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ನೆಡೆಸಲಾಗುತ್ತದೆ.