ಸಂಪನ್ನವಾಗಿ ಜರುಗಿದ ಕಳ್ಳನಹಳ್ಳಿ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ನಿಟ್ಟೂರು : ಕಳ್ಳನಹಳ್ಳಿ ಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿಯವರ ವಾರ್ಷಿಕ ಜಾತ್ರಾ ಮಹೋತ್ಸವವು12/3 ರಿಂದ 13/3 ರ ವರೆಗೆ ಅದ್ದೂರಿಯಿಂದ ಜರುಗಿತು.

ಭಾನುವಾರ ದಂದು ಧ್ವಜಾರೋಹಣ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ವಿನಾಯಕನ ಪೂಜಾ ಮೂಲಕ ಗಂಗಾಭಾಗೀರಥೀ ಪೂಜೆ, ರುದ್ರಾ ಪಠಣ ನೆರೆವೀರಿಸಿ ಸಾಯಂಕಾಲ ಸ್ವಾಮಿಯವರ ನೆಡೆಮುಡಿ ಉತ್ಸವವು ಜರುಗಿತು.

ಸೋಮವಾರ ದಂದು ಸ್ವಾಮಿಯವರಿಗೆ ಗಣಪತಿ ಪೂಜೆ, ಮಹಾರುದ್ರಾಭಿಷೇಕ ಹಾಗೂ ಅಷ್ಟೊತ್ತರ ಪೂಜೆ ನೆರೆವೇರಿಸಿದ ನಂತರ ಮಹಾಮಂಗಳಾರತಿಯನ್ನು ನೆಡೆಸಿ ಪ್ರಸಾದವಿನಯೋಗ ಮಾಡಲಾಯಿತು.ಬೆಳಗ್ಗೆ 11 ಗಂಟೆಗೆ ಧಾರ್ಮಿಕ ಸಭೆಯನ್ನು ಆಯೋಜಿಸಲಾಗಿತ್ತು ಈ ಸಭೆಯ ಅಧ್ಯಕ್ಷತೆಯನ್ನು ಗವಿಮಠಾಧ್ಯಕ್ಷರಾದ ಶ್ರೀ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಸಭೆಯನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆಡೆಯಿತು, ಸಂಜೆ ಮುತ್ತಿನಪಲ್ಲಕ್ಕಿ ಉತ್ಸವ, ನಂದಿಧ್ವಜ, ಲಿಂಗಾಧವೀರರ ಕುಣಿತ, ಡಂಕವಾದ್ಯ ಸಮೇತ ಶ್ರೀ ಬಸವೇಶ್ವರ ಸ್ವಾಮಿಯವರ ಉತ್ಸವವು ವಿಜೃಂಭಣೆ ನೆಡೆಯಿತು, ಈ ಸಂದರ್ಭದಲ್ಲಿ ಗ್ರಾಮಸ್ಥರು ಆಜು ಬಾಜು ಗ್ರಾಮಸ್ಥರು, ಹಾಗೂ ಭಕ್ತಾದಿಗಳು ಸ್ವಾಮಿಯವರ ಕೃಪೆಗೆ ಭಾಗಿಯಾದರು.

ರಾತ್ರಿ 10 ಗಂಟೆಯಿಂದ ಸಾಧನ ಮೆಲೋಡಿಸ್ ಇವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.