ರಾಜ್ಯ ಮಟ್ಟದ ಕಬ್ಬಡ್ಡಿ ಪಂದ್ಯಾವಳಿ ; ಶ್ರೀ ಸಿದ್ದಲಿಂಗೇಶ್ವರ ಸುಕ್ಷೇತ್ರ ಗೊಲ್ಲಹಳ್ಳಿ

ಗುಬ್ಬಿ : ತಾಲ್ಲೋಕಿನ ಕಸಬ ಹೋಬಳಿಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಸುಕ್ಷೇತ್ರ ಗೊಲ್ಲಹಳ್ಳಿಯಲ್ಲಿ 28/3/23 ಮಂಗಳವಾರ ಹಾಗೂ 29/3/23 ರ ಬುಧವಾರ ದಂದು ಮೊದಲನೇ ವರ್ಷದ ರಾಜ್ಯಮಟ್ಟದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ಮ್ಯಾಟ್ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಶ್ರೀ ಶ್ರೀ ಲಿಂ|| ಗೌರಿಶಂಕರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಶ್ರೀ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಸಿದ್ದಲಿಂಗಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಸಿದ್ದಲಿಂಗೇಶ್ವರ ಕಪ್ ಅನ್ನು ಆಯೋಜಿಸಲಾಗಿದ್ದು ಆಸಕ್ತ ಸ್ಪರ್ದಿಗಳು ಭಾಗವಹಿಸಬೇಕೆಂದು ಮಠಾಧ್ಯಕ್ಷರಾದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮಿಗಳು ಹಾಗೂ ಆಜು ಬಾಜು ಗ್ರಾಮಸ್ಥರು ಕೋರಿದ್ದಾರೆ , ವಿಜೇತ ಸ್ಪರ್ದಿಗಳಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಬಹುಮಾನಗಳು ವಿವರಣೆ

ಪುರುಷ ವಿಭಾಗ

  • ಪ್ರಥಮ ಬಹುಮಾನ – 17,777 ರೂ ಹಾಗೂ ಆಕರ್ಷಕ ಟ್ರೋಫಿ.
  • ದ್ವಿತೀಯ ಬಹುಮಾನ – 11,111 ರೂ ಹಾಗೂ ಆಕರ್ಷಕ ಟ್ರೋಫಿ.
  • ತೃತೀಯ ಬಹುಮಾನ – 6,666 ರೂ ಹಾಗೂ ಆಕರ್ಷಕ ಟ್ರೋಫಿ.
  • ಚತುರ್ಥಿ ಬಹುಮಾನ – 6,666 ರೂ ಹಾಗೂ ಆಕರ್ಷಕ ಬಹುಮಾನ.

ಮಹಿಳಾ ವಿಭಾಗ

  • ಪ್ರಥಮ ಬಹುಮಾನ – 15,555 ರೂ ಹಾಗೂ ಆಕರ್ಷಕ ಟ್ರೋಫಿ.
  • ದ್ವಿತೀಯ ಬಹುಮಾನ – 9,999 ರೂ ಹಾಗೂ ಆಕರ್ಷಕ ಟ್ರೋಫಿ.
  • ತೃತೀಯ ಬಹುಮಾನ – 5,555 ರೂ ಹಾಗೂ ಆಕರ್ಷಕ ಟ್ರೋಫಿ.
  • ಚತುರ್ಥಿ ಬಹುಮಾನ – 5,555 ರೂ ಹಾಗೂ ಆಕರ್ಷಕ ಬಹುಮಾನ.

ಆಸಕ್ತ ಸ್ಪರ್ದಿಗಳು ತಂಡದ ನೋಂದಣಿಗಾಗಿ 7483021919 ಸಂಪರ್ಕಿಸಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 9538039484