ನಿಟ್ಟೂರು : ವಿದ್ಯುತ್ ಉಪಸ್ಥಾವರಕ್ಕಾಗಿ ರೈತರಿಂದ ಆಗ್ರಹ

ಗುಬ್ಬಿ : ತಾಲ್ಲೊಕಿನ ನಿಟ್ಟೂರು ಹೋಬಳಿ ಶ್ರೀ ಗಂಗಾಕ್ಷೇತ್ರದಲ್ಲಿ 200 ಕ್ಕೂ ಹೆಚ್ಚು ಜನ ರೈತರು ಸಭೆ ಸೇರಿ ಈ ಭಾಗಕ್ಕೆ ವಿದ್ಯುತ್ ಉಪಸ್ಥಾವರ ಮಾಡಿಕೊಡಬೇಕೆಂದು ಆಗ್ರಹಿಸಿದರು.

ರೈತ ತಾತಯ್ಯ ಮಾತನಾಡಿ ಈ ಭಾಗದ ನಂದಿಹಳ್ಳಿ, ದೊಣ್ಣೆರೆ, ಡಿ. ರಾಂಪುರ, ಅತ್ತಿಕಟ್ಟೆ, ಬಿ. ಕೋಡಿಹಳ್ಳಿ, ಬೆಣ್ಣೂರು, ಗಂಗಸಂದ್ರ ಸೇರಿದಂತೆ ಸುಮಾರು 20 ಗ್ರಾಮಗಳಲ್ಲಿ ರೈತರಿಗೆ ಅನುಕೂಲವಾಗುವಂತೆ KEB ಸ್ಟೇಷನ್ ಅನ್ನು ಇಲಾಖೆಯವರು ಮಂಜೂರುಮಾಡಿ ಕೆಲಸವನ್ನು ಸಹ ಆರಂಭಿಸಲು ಸಿದ್ಧತೆಯನ್ನು ಮಾಡಿದ್ದಾರೆ, ಆದರೆ ಸ್ಥಳೀಯ ರೈತರೊಬ್ಬರು ನಿಗದಿ ಮಾಡಿರುವ ಜಾಗ ನಮ್ಮದು ಎಂದು ಉಚ್ಚ ನ್ಯಾಯಾಲಯಕ್ಕೆ ಹೋಗಿರುವ ಕಾರಣದಿಂದ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದೆ ಹಾಗಾಗಿ ಈ ಭಾಗದ ರೈತರೆಲ್ಲರೂ ಸೇರಿಕೊಂಡು ಕೂಡಲೇ ನ್ಯಾಯಾಲಯದಲ್ಲಿರುವಂತಹ ಪ್ರಕರಣವನ್ನು ತೆರವುಗೊಳಿಸಿ ನಮಗೆ ಇಲ್ಲಿಗೆ ಸ್ಟೇಷನ್ ಮಾಡಿಕೊಡಬೇಕು ಹಾಗಾಗಿ ಸರ್ಕಾರ ಈ ವಿಚಾರದಲ್ಲಿ ಸಹಕಾರ ಮಾಡಬೇಕು ಎಂದು ಆಗ್ರಹ ಮಾಡಿದರು.

ಕಾಂಗ್ರೆಸ್ ಮುಖಂಡ ಜಿ ಎಸ್ ಪ್ರಸನ್ನಕುಮಾರ್ ಮಾತನಾಡಿ ಇಲ್ಲಿರುವಂತಹ ಜಾಗ ಸರ್ಕಾರಿ ಜಾಗವಾಗಿದೆ ಹಾಗಾಗಿ ಸರ್ಕಾರ ಇಲ್ಲಿಗೆ ಯೋಜನೆಯನ್ನು ರೂಪಿಸಿದೆ ಆದರೆ ಒಬ್ಬ ರೈತರು ಈ ಭಾಗದಲ್ಲಿ ಸಾಕಷ್ಟು ದಿನಗಳಿಂದ ಉಳುಮೆ ಮಾಡಿದ್ದುಈ ಜಾಗ ನಮಗೆ ಸೇರಬೇಕು ಎಂದು ಸರ್ಕಾರಕ್ಕೆ ಅರ್ಜಿ ಹಾಕಿ ಅವರಿಗೆ ಬರಬೇಕು ಎಂದು ತಿಳಿಸಿದ್ದಾರೆ ಹಾಗಾಗಿ ಆ ರೈತರ ತೋಟ ಅಥವಾ ಮರ ಗಿಡಗಳನ್ನು ಬೆಳೆಸಿದ್ದಲ್ಲಿ ಅವುಗಳಿಗೆ ಅನುಕೂಲ ಮಾಡಿ ಕೊಡುವಂತ ಕೆಲಸವನ್ನು ಸಹ ಸರ್ಕಾರ ಮಾಡಿಕೊಡಬೇಕಾಗಿದೆ ಎಂದು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ, ಸದಸ್ಯ ರಾಜಶೇಖರ್, ಕೆ ಟಿ ಸ್ವಾಮಿ, ರೈತರದ ಶಿವಶಂಕರ್, ರೇವಣ್ಣ, ಸಿದ್ದಯ್ಯ,ಸತೀಶ್ ಭರತ್ ಗೌಡ ರೈತರು ಇದ್ದರು.