ಗುಬ್ಬಿ : ತಾಲ್ಲೂಕಿನ ಚೇಳೂರು ಹೋ, ಮಾದಾಪುರ ಬಳಿ ಮಣ್ಣೇಮಾರಿ ಕಾವಲ್ ನಲ್ಲಿ ಅನಾಧಿಕಾಲದಿಂದಲೂ ನೆಲೆಸಿರುವ ಶ್ರೀ ಮಣ್ಣಮ್ಮದೇವಿ ರಥೋತ್ಸವವು ಇಂದು ಅದ್ದೂರಿಯಿಂದ ಜರುಗಿತು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಒಂದು ವಾರದವರೆಗೂ ಶ್ರೀ ಮಣ್ಣಮ್ಮದೇವಿ ಜಾತ್ರಾ ಮಹೋತ್ಸವವು ದಿನಾಂಕ 14/3 ಮಂಗಳವಾರದಿಂದ ದಿನಾಂಕ 20/3 ಸೋಮವಾರದ ವರೆಗೆ ನೆಡೆಯಲಿದ್ದು, ವಾರದ ಪ್ರತಿದಿನವೂ ವಿಭಿನ್ನವಾದ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಶುಕ್ರವಾರ ಹೋಮ–ಹವನಗಳ ನಂತರ ಅಲಂಕೃತ ರಥೋತ್ಸವದಲ್ಲಿ ಮಣ್ಣಮ್ಮ ದೇವಿಯನ್ನು ಕೂರಿಸಿ ತೇರನ್ನು ಎಳೆಯಲಾಯಿತು. ಸಾವಿರಾರು ಮಂದಿ ರಥೋತ್ಸವದಲ್ಲಿ ಭಾಗವಹಿಸಿದ್ದರು. ದೇವರಿಗೆ ಧವನದ ಬಾಳೆಹಣ್ಣು ಎಸೆದು ಕೃತಾರ್ಥರಾದರು.

ಕಡೆಯ ದಿನವಾದ ಸೋಮವಾರ ಹಗಲು ಜಾತ್ರೆಯೊಂದಿಗೆ ಶ್ರೀ ಮಣ್ಣಮ್ಮದೇವಿ ಜಾತ್ರಾ ಮಹೋತ್ಸವವು ಮುಕ್ತಾಯಗೊಳ್ಳುತ್ತದೆ.