ತುರುವೇಕೆರೆ : ತಾಲ್ಲೊಕಿನ ಮಾವಿನಕೆರೆ ಪ್ರಾಥಮಿಕ ಅರೋಗ್ಯ ಕೇಂದ್ರದ ವತಿಯಿಂದ ಹದಿಹರೆಯದವರಿಗೆ ಅರೋಗ್ಯ ಶಿಕ್ಷಣವನ್ನು ಸರ್ಕಾರಿ ಪ್ರೌಢ ಶಾಲೆ ಮಾವಿನಕೆರೆಯಲ್ಲಿ ಆಯೋಜಿಸಲಾಗಿತ್ತು.

ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ,ಅರೋಗ್ಯ ನಿರೀಕ್ಷಣಾಧಿಕಾರಿ, ಪ್ರಾ ಆ ಸುರಕ್ಷಣಾಧಿಕಾರಿ ಇವರುಗಳು ಮಾತನಾಡಿ ಹದಿಹರೆದವರಲ್ಲಿ ಉಂಟಾಗುವ ಮಾನಸಿಕ, ದೈಹಿಕ ಬದಲಾವಣೆಗಳು ಮತ್ತು ವೈಯಕ್ತಿಕ ಸ್ವಚ್ಛತೆ, ಹಾಗೂ ಜೀವನದ ಗುರಿ, ಉದ್ದೇಶ ಮತ್ತು ಅದನ್ನು ತಲುಪುವಲ್ಲಿ ಶಿಕ್ಷಕರ ಮಾರ್ಗದರ್ಶನ, ಹದಿಹರೆಯದವರಲ್ಲಿನ ಸಂವೇಗಾತ್ಮಕ ಸಮಸ್ಯೆಗಳು ಮತ್ತು ಅವುಗಳಿಂದ ಹೊರಬರುವ ಮಾರ್ಗಗಳು, ಕಲಿಕೆ ಮತ್ತು ಗೊಂದಲ ಹಾಗೂ ಅವುಗಳ ನಿರ್ವಹಣೆಯ ಮುಂತಾದ ಚಟುವಟಿಕೆಗಳ ಬಗ್ಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಶಾಲಾ ಶಿಕ್ಷಕರುಗಳು ಭಾಗವಹಿಸಿದ್ದರು.