EPFO ಸಂಸ್ಥೆಯಿಂದ 2859 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಏಪ್ರಿಲ್ 26 ಕೊನೆಯ ದಿನಾಂಕ

ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಿಂದ (EPFO) 2859 ವಿವಿಧ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು ಹಾಗೂ ವಿಶ್ವವಿದ್ಯಾಲಯಗಳಿಂದ ಪದವಿ ಹಾಗೂ ದ್ವಿತೀಯ ಪಿಯುಸಿ ಮುಗಿಸುರಬೇಕು, ಹಾಗೂ ಕನಿಷ್ಠ 18 ರಿಂದ ಗರಿಷ್ಠ 27 ವರ್ಷ ಮೀರಿರಬಾರದು.

ಹುದ್ದೆಗಳ ವಿವರ

  • ಸೋಶಿಯಲ್ ಸೆಕ್ಯೂರಿಟಿ ಅಸಿಸ್ಟೆಂಟ್ – 2674 ಹುದ್ದೆಗಳು.
  • ಸ್ಟೆನೋಗ್ರಾಫರ್ – 185 ಹುದ್ದೆಗಳು.

ವೇತನ ಶ್ರೇಣಿ

  • ಸೋಶಿಯಲ್ ಸೆಕ್ಯೂರಿಟಿ ಅಸಿಸ್ಟೆಂಟ್ – 29,200 ರಿಂದ 92,300 ರೂ ವರೆಗೆ.
  • ಸ್ಟೆನೋಗ್ರಾಫರ್ – 25,500 ರಿಂದ 81,100 ರೂ ವರೆಗೆ.

ವಿದ್ಯಾರ್ಹತೆ

  • ಸೋಶಿಯಲ್ ಸೆಕ್ಯೂರಿಟಿ ಅಸಿಸ್ಟೆಂಟ್ – ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಸ್ಟೆನೋಗ್ರಾಫರ್ – ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – 27/03/2023, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 26/04/2023.

ಅರ್ಜಿ ಸಲ್ಲಿಸಲು ಮಾರ್ಚ್ 27 ರಂದು EPFO ವೆಬ್ ಸೈಟ್ ಅಲ್ಲಿ ಲಿಂಕ್ ಅನ್ನು ಬಿಡುಗಡೆ ಮಾಡಲಾಗುತ್ತದೆ.