ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಎಸ್ ಆರ್ ಶ್ರೀನಿವಾಸ್

ಗುಬ್ಬಿ : ಕ್ಷೇತ್ರದ ಶಾಸಕರಾದ ಎಸ್ ಆರ್ ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದರು.

ಸುಮಾರು 20 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಶಾಸಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಶ್ರೀನಿವಾಸ್ ಅವರು ನೆನ್ನೆ ವಿಧಾನಸೌದಕ್ಕೆ ತೆರಳಿ ಸಭಾಧ್ಯಕ್ಷರಿಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಂತರ ಮಾತನಾಡಿದ ಶ್ರೀನಿವಾಸ್ ಅವರು ನನ್ನ ಮುಂದೆ ಬೇರೆ ಯಾವುದೇ ದಾರಿ ಇರಲಿಲ್ಲ ನಾನು ಪಕ್ಷದಲ್ಲಿ ಇದ್ದಾಗಲೇ ಬೇರೊಬ್ಬರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಸ್ವತಃ ಕುಮಾರಸ್ವಾಮಿಯವರೇ ಘೋಷಿಸಿದರು ಆದ್ದರಿಂದ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೇರುವುದಾಗಿಯೂ ಸಹ ಹೇಳಿದ್ದಾರೆ.