ಸಿ ಆರ್ ಪಿ ಎಫ್ (CRPF) ನಲ್ಲಿ 9212 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ; ಏಪ್ರಿಲ್ 25ಕೊನೆಯ ದಿನಾಂಕ

ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(CRPF)ನಲ್ಲಿ ತಾಂತ್ರಿಕ ಮತ್ತು ಟ್ರೇಡ್ಸ್ ಮ್ಯಾನ್ ಹುದ್ದೆಗಳಿಗೆ 9212 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದಾರೆ.

ನೋಂದಣಿ ಪ್ರಕ್ರಿಯೆಯನ್ನು 27 ನೇ ಮಾರ್ಚ್ ರಿಂದ ಪ್ರಾರಂಭಿಸಿದ್ದಾರೆ, ಆಸಕ್ತ ಅಭ್ಯರ್ಥಿಗಳು www.crpf.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ವಿದ್ಯಾರ್ಹತೆ

  • ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ (10+2) ದ್ವಿತೀಯ ಪಿಯುಸಿ ಯನ್ನು ಮುಗಿಸಿರಬೇಕು.

ಹುದ್ದೆಗಳ ವಿವರ

  • ಕಾನ್ಸ್ಟೇಬಲ್ ಪುರುಷ – 9105
  • ಕಾನ್ಸ್ಟೇಬಲ್ ಮಹಿಳೆ – 107
  • ಒಟ್ಟು = 9212

ವೇತನಶ್ರೇಣಿ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಮಟ್ಟ 3ರ ಅಡಿಯಲ್ಲಿ 21,700 – 69,100 ರೂ ವರೆಗೆ ನೀಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿರುತ್ತದೆ.