ಏಪ್ರಿಲ್ 7 ರಿಂದ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ; ತುರುವೇಕೆರೆ

ತುರುವೇಕೆರೆ : ತಾಲ್ಲೊಕಿನ ದಬ್ಬೇಘಟ್ಟ ಹೋಬಳಿಯ ಕಾಡಸೂರು ಗ್ರಾಮ ದೇವತೆಯಾದ ಕೆಂಪಮ್ಮ ದೇವಿಯ ಜಾತ್ರಾ ಮಹೋತ್ಸವವು ಏಪ್ರಿಲ್ 7 ಹಾಗೂ 8 ರಂದು ಜರುಗಲಿದೆ.

ಶುಕ್ರವಾರದಂದು ಬೆಳಗ್ಗೆ ಧ್ವಜಾರೋಹಣ,ರಾಥೋತ್ಸವ ಹಾಗೂ ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಸಹಸ್ರನಾಮ ಕುಂಕುಮಾರ್ಚನೆ, ಪೂಜಾ ಕಾರ್ಯಕ್ರಮ ಮಹಾಮಂಗಳಾರತಿ ನೆರೆವೇರಲಿದೆಶನಿವಾರ ಮಧ್ಯಾಹ್ನ ಭಕ್ತರ ಸಮೂಹದಲ್ಲಿ ಕೆಂಪಮ್ಮದೇವಿಯ ರಾಥೋತ್ಸವವೂ ವಿಜೃಂಭಣೆಯಿಂದ ನೆಡೆಯಲಿದೆ, ಹಾಗೂ ಭಾನುವಾರ ರಾತ್ರಿ 9:30 ಕ್ಕೆ ಕುರುಕ್ಷೇತ್ರ ನಾಟಕ ಪ್ರದರ್ಶನವಿರುತ್ತದೆ.