ಶ್ರೀ ಶ್ರೀ ಶ್ರೀ ಶಿವಕುಮಾರಮಹಾಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ; ಸಿದ್ದಗಂಗಾ ಮಠ

ತುಮಕೂರು : ಪದ್ಮಭೂಷಣ, ಕರ್ನಾಟಕ ರತ್ನ, ಬಸವಶ್ರೀ ಪ್ರಶಸ್ತಿ ಪುರಸ್ಕೃತರು, ತ್ರಿವಿಧ ದಾಸೋಹಿಗಳು ಡಾ।। ಶ್ರೀ ಶ್ರೀ ಶ್ರೀ ಶಿವಕುಮಾರಮಹಾಶಿವಯೋಗಿಗಳವರ 116ನೇ ಜಯಂತಿ ಹಾಗೂ ಗುರುವಂದನಾಮಹೋತ್ಸವವು ಶ್ರೀ ಸಿದ್ಧಲಿಂಗಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆ 11.00 ಗಂಟೆಗೆ ರಾಜ್ಯಪಾಲರಾದ ಥಾವರ್ ಚಂದ್ ಗಪ್ಲೋಟ್ಅವರಿಂದ ಉದ್ಘಾಟನೆಯಾಗಲಿದೆ.

ಈ ಕಾರ್ಯಕ್ರಮದಲ್ಲಿ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಕೆರೆಗೋಡಿ ರಂಗಾಪುರ ಮಠಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ಇತರೆ ಮಠಾಧೀಶರು, ಹರಗುರುಚರಮೂರ್ತಿಗಳು ಮತ್ತು ನಾಡಿನ ಗಣ್ಯಮಾನ್ಯರು ಭಾಗವಹಿಸಲಿದ್ದಾರೆ.

ಇದೇ ದಿನ ಸಂಜೆ 5:00 ಗಂಟೆಗೆ “ಬಸವಭಾರತ”ಶ್ರೀ ಶಿವಕುಮಾರಸ್ವಾಮೀಜಿ ಗಾನೋತ್ಸವವನ್ನು ಗಾಯಕ ಹಂಸಲೇಖ ಅವರ ನೇತೃತ್ವದಲ್ಲಿ ಕೆ.ಎಸ್. ಚಿತ್ರಾ, ಎಸ್.ಪಿ. ಚರಣ್, ಮಧುಬಾಲಕೃಷ್ಣನ್, ಹೇಮಂತ್ ಕುಮಾರ್, ಅನುರಾಧ ಭಟ್, ಶ್ರೀಮತಿ ಲತಾ ಹಂಸಲೇಖ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.