ಇಂದು ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ; ನಿಟ್ಟೂರು

ಗುಬ್ಬಿ : ತಾಲ್ಲೋಕಿನ ನಿಟ್ಟೂರು ಹೋಬಳಿಯ ಮಧನಘಟ್ಟ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಇಂದು ಜರುಗಲಿದೆ.

ಭಾನುವಾರ ಬೆಳಗ್ಗೆ 6:00 ಗಂಟೆಗೆ ಗಂಗಾಪೂಜೆ ಧ್ವಜರೋಹಣದ ಮೂಲಕ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡು ಗಣಪತಿ ಪೂಜೆ, ಪುಣ್ಯಾಹಃ ನಾಂದಿ,ಪಂಚಕಲಶ,ನವಗ್ರಹ ಪೂಜೆ, ಮಹಾರುದ್ರಭಿಷೇಕ, ಸಹಸ್ರ ಬಿಲ್ವಾರ್ಚನೆ, ಹಾಗೂ ಮಹಾಮಂಗಳಾರತಿ ನೆರೆವೇರಲಿದೆ.

ರಾತ್ರಿ 8:00 ಗಂಟೆಗೆ ಮಹಾದಾಸೋಹವನ್ನು ಏರ್ಪಡಿಸಲಾಗಿದೆ, ನಂತರ ರಾತ್ರಿ 9:30ಕ್ಕೆ ಶ್ರೀ ಬಸವೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿಯ ಉತ್ಸವವು ನಂದೀಧ್ವಜ ಕುಣಿತ, ಲಿಂಗದವೀರರ ಕುಣಿತ,ಢoಕವಾಧ್ಯ, ಮದ್ದು ಬಾಣ ಬಿರುಸುಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಿಂದ ಜರುಗಲಿದೆ.

ಭಕ್ತಾದಿಗಳು ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಊರಿನ ಗ್ರಾಮಸ್ಥರು ಕೋರಿದ್ದಾರೆ.