ಚಿಕ್ಕನಾಯಕನಹಳ್ಳಿ : ತಾಲೋಕಿನ ತೀರ್ಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಯರೇಕಟ್ಟೆ ವಜ್ರ ಪುಣ್ಯಕ್ಷೇತ್ರದಲ್ಲಿ ನೆಲೆಸಿರುವ ಶ್ರೀ ತೀರ್ಥರಾಮೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಇಂದಿನಿಂದ ದಿನಾಂಕ 9/4 ಭಾನುವಾರದ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಇಂದು ಗಣಪತಿ ಪೂಜೆ, ಗಂಗಾಪೂಜೆ, ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡು ಕುಂಭಾಭಿಷೇಕ, ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ, ಹೋಮ, ಮಹಾಮಂಗಳಾರತಿ ನೆರೆವೇರಿಸಿ ನಂತರ ಮಹಾದಾಸೋಹವನ್ನು ಏರ್ಪಡಿಸಲಾಗಿದೆ.
ದಿನಾಂಕ 3-4-23 ರ ಸೋಮವಾರದಂದು ಮಧ್ಯಾಹ್ನ 12:30 ರಿಂದ 1:30 ರ ವರೆಗೆ ಸಲ್ಲುವ ಅಭಿಜಿನ್ ಶುಭ ಲಗ್ನದಲ್ಲಿ ಲಿಂಗದವೀರರ ಕುಣಿತ ನಂದೀಧ್ವಜ ಕುಣಿತ ಸಮೇತ ತೀರ್ಥರಮೇಶ್ವರ ಸ್ವಾಮಿಯ ಮಹಾರಥೋತ್ಸವವು ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ನೆಡೆಯಲಿದೆ.
ಮಂಗಳವಾರದಿಂದ ಭಾನುವಾರದ ವರೆಗೆ ಶ್ರೀ ತೀರ್ಥರಮೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಅಭಿಷೇಕ, ಪುಷ್ಪಲಂಕಾರ, ದಾಸೋಹ, ಊರಿನ ರಾಜಬೀದೀಗಳಲ್ಲಿ ಉತ್ಸವವು ಜರುಗಲಿವೆ, ಕೊನೆಯ ದಿನವಾದ ಭಾನುವಾರದಂದು ಶ್ರೀ ಸ್ವಾಮಿಯವರು ಸ್ವಸ್ಥಾನಕ್ಕೆ ಬಿಜಯಂಗೈಯುವರು.