ಸಂಪನ್ನವಾಗಿ ಜರುಗಿದ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ; ನಿಟ್ಟೂರು

ಗುಬ್ಬಿ : ತಾಲ್ಲೋಕಿನ ನಿಟ್ಟೂರು ಹೋಬಳಿಯ ಮಧನಘಟ್ಟ ಗ್ರಾಮದಲ್ಲಿ ನೆಲೆಸಿರುವ ಶ್ರೀ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಭಕ್ತಾದಿಗಳ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಜರುಗಿತು.

ಬೆಳಗ್ಗೆ ಗಂಗಾ ಪೂಜೆ, ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವವು ಪ್ರಾರಂಭಗೊಂಡಿತು ನಂತರ ಸ್ವಾಮಿಯವರಿಗೆ ಮಹಾರುದ್ರಾಭಿಷೇಕ ಸಹಸ್ರ ಬಿಲ್ವಾರ್ಚನೆ ಮಹಾಮಂಗಳಾರತಿ ನೆರೆವೇರಿದ ನಂತರ ಪ್ರಸಾದವನ್ನು ವಿತರಿಸಲಾಯಿತು.

ರಾತ್ರಿ 9:30 ರ ನಂತರ ನಂದೀಧ್ವಜ, ಲಿಂಗದವೀರಕುಣಿತ,ಢoಕವಾಧ್ಯ,ಮದ್ದು ಬಾಣಗಳನ್ನು ಸಿಡಿಸಿ ಊರಿನ ಬೀದಿಗಳಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರ ಉತ್ಸವವು ವಿಜೃಂಭಣೆಯಿಂದ ಜರುಗಿತು ನಂತರ ಸ್ವಾಮಿಯವರು ಸ್ವಸ್ಥಾನಕ್ಕೆ ಬಿಜಯಂಗೈದರು.