ಮದುವೆ ಸಿದ್ಧತೆಯಲ್ಲಿದ್ದ ವರನ ಹತ್ತಿರ ಚೆಕ್ ಪೋಸ್ಟ್ ನಲ್ಲಿ 1.20ಲಕ್ಷ ಪೊಲೀಸರ ವಶಕ್ಕೆ; ಕೊರಟಗೆರೆ

ಕೊರಟಗೆರೆ : ಚೇಳೂರು ಹೋಬಳಿಯ ಅಂಕಸಂದ್ರ ಗ್ರಾಮದ ನಿವಾಸಿಯಾದ ಕಾಟಯ್ಯ ಎಂಬುವವರ ಪುತ್ರ ಮುನಿಸ್ವಾಮಿ(ಬೆಸ್ಕಾಂ ಲೈನ್ ಮ್ಯಾನ್) ತಮ್ಮ ವಿವಾಹವು ಏಪ್ರಿಲ್ 22 ಹಾಗೂ 23 ರಂದು ಕೊರಟಗೆರೆ ಪಟ್ಟಣದಲ್ಲಿ ನಿಶ್ಚಯವಾಗಿದ್ದು, ಮದುವೆಗೆ ಬೇಕಾದ ಒಡವೆಗಳನ್ನು ಮುಂಚಿತವಾಗಿ ಆಭರಣದ ಅಂಗಡಿಯವರಿಗೆ ಮುಂಗಡವಾಗಿ 42,000 ರೂ ಪಾವತಿಸಿದ್ದರು ಇನ್ನುಳಿದ 1.20 ಲಕ್ಷ ರೂ ಗಳನ್ನು ಪಾವತಿಸಿ ಆಭರಣಗಳನ್ನು ತರಲು ಹೋಗುವಾಗ ತೋವಿನಕೆರೆ ಸಮೀಪ ಜೋನಿಗರಹಳ್ಳಿ ಕ್ರಾಸ್ ನಲ್ಲಿ ಇರುವ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಡೆದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಕೊರಟಗೆರೆ ಠಾಣೆಯಲ್ಲಿ FIR ದಾಖಲಾಗಿದೆ, ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಿದ ಕಾರಣ ಮುನಿಸ್ವಾಮಿಯವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಆದರೆ ಇನ್ನೂ ವಿಚಾರಣೆ ಇದೇ ಎಂದು ಹೇಳಿ ಹಣವನ್ನು ಹಿಂತಿರುಗಿಸಿರುವುದಿಲ್ಲ.