ಗುಬ್ಬಿ ; ಬಿಜೆಪಿಯಿಂದ ದಿಲೀಪ್ ಗೆ ಟಿಕೆಟ್

ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಹೈಕಾಮಂಡ್ ದಿಲೀಪ್ ಅವರಿಗೆ ಟಿಕೆಟ್ ನೀಡಿದೆ.

2018 ರಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ದಿಲೀಪ್ ಕುಮಾರ್ ಅವರು 30 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರು.

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ ಅವರ ಪುತ್ರ ಹಾಗೂ ಬೆಟ್ಟಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಹೈಕಾಮಂಡ್ ನವರು ಯುವ ಮುಖಂಡ ಎಸ್. ಡಿ ದಿಲೀಪ್ ಕುಮಾರ್ ಅವರಿಗೆ ಟಿಕೆಟ್ ನೀಡಿದೆ.

ಪಕ್ಷ ಯಾರಿಗೆ ಟಿಕೆಟ್ ನೀಡಿದರು ನಾವೆಲ್ಲರೂ ಸಹ ಪಕ್ಷಕ್ಕೆ ಬೆಂಬಲ ನೀಡುತ್ತೇವೆ ಯಾವುದೇ ರೀತಿಯ ಗೊಂದಲ ಬೇಡ ಎಂದು ಬಿಜೆಪಿ ಮುಖಂಡ ಜಿ.ಎನ್. ಬೆಟ್ಟಸ್ವಾಮಿ ಮಾತನಾಡಿ ತಿಳಿಸಿದರು.