ತುಮಕೂರು : ನಾಮಪತ್ರ ಸಲ್ಲಿಸಿದ ಬಿಜೆಪಿ ನಗರ ಹಾಗೂ ಗ್ರಾಮಾಂತರ ಅಭ್ಯರ್ಥಿಗಳು

ತುಮಕೂರು: ನಗರ ಕ್ಷೇತ್ರಕ್ಕೆ ಜಿ.ಬಿ.ಜ್ಯೋತಿಗಣೇಶ್ ಮತ್ತು ತುಮಕೂರು ಗ್ರಾಮಾಂತ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಿ. ಸುರೇಶ್ ಗೌಡ ಅವರುಗಳು ಬಾರೀ ಮೆರವಣಿಗೆಯೊಂದಿಗೆ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಬಿ.ಹೆಚ್.ರಸ್ತೆಯಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ಕಾರ್ಯಕರ್ತರ ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯು ಬಿ. ಲಕ್ಕಪ್ಪ ವೃತ್ತದಿಂದ ಟೌನ್ ಹಾಲ್ ಬಿಜಿಎಸ್ ವೃತ್ತ, ಬಿಎಚ್ ರಸ್ತೆ, ಎಂಜಿ ರಸ್ತೆ ಮೂಲಕ ಸಾಗಿ, ಜಿಲ್ಲಾಧಿಕಾರಿ ಕಚೇರಿ ತಲುಪಿತು. ಮೆರವಣಿಗೆ ಮಾರ್ಗದಲ್ಲಿ ಅಭ್ಯರ್ಥಿ ಗಳಿಗೆ ಕ್ರೇನ್ ನಲ್ಲಿ ಬೃಹತ್ ಹೂವಿನ ಹಾರ ಪುಷ್ಪವೃಷ್ಟಿಗೈಯ್ಯಲಾಯಿತು.ಬಳಿಕ ತುಮಕೂರು ತಾಲ್ಲೂಕು ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಿದ ನಂತರ ಹೊರಗಡೆ ಜಮಾಯಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಬಿಜೆಪಿ ಅಭ್ಯರ್ಥಿಗಳು ಮಾತನಾಡಿದರು, ಈ ಸಂದರ್ಭದಲ್ಲಿ ಸಂಸದ ಹಾಗೂ ನಟ ಜಗ್ಗೇಶ್, ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ. ಆರ್. ಹುಲಿನಾಯ್ಕರ್, ಜಿಪಂ ಮಾಜಿ ಅಧ್ಯಕ್ಷ ವೈ. ಎಚ್ ಹುಚ್ಚಯ್ಯ, ಬಿಜೆಪಿ ಪಾಲಿಕೆ ಸದಸ್ಯರುಗಳು,ಪಕ್ಷದ ವಿವಿಧ ಮೋರ್ಚಾದ ಪದಾಧಿಕಾರಿಗಳು, ಟಿ.ಆರ್.ಸದಾಶಿವಯ್ಯ ಸೇರಿ ಇತರ ಮುಖಂಡರು ಮೆರವಣಿಗೆಯಲ್ಲಿ ಹಾಜರಿದ್ದರು.