ತುಮಕೂರು : ಸಿದ್ದಗಂಗಾ ಮಠದ ಉತ್ತರಾಧಿಕಾರಿ ನೇಮಕ, 23ರಂದು ಪಟ್ಟಾಧಿಕಾರ

ತುಮಕೂರು : ತ್ರಿವಿಧ ದಾಸೋಹ ಮಠವೆಂದು ಪ್ರಸಿದ್ಧವಾದ ಸಿದ್ದಗಂಗಾ ಮಠದ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೊಕಿನ ಮೈಲನಹಳ್ಳಿ ಗ್ರಾಮದ ಷಡಕ್ಷರಿ ಹಾಗೂ ವಿರುಪಾಕ್ಷಮ್ಮ ದಂಪತಿಯ ಪುತ್ರರಾದ 35 ವರ್ಷದ ಮನೋಜ್ ಕುಮಾರ್ ಅವರನ್ನು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ, ದಿನಾಂಕ 23/04/2023 ರಂದು ಬಸವ ಜಯಂತಿ ಹಬ್ಬದ ದಿನ ಪಟ್ಟಾಧಿಕಾರ ಮಹೋತ್ಸವವು ಜರುಗಲಿದೆ ಎಂದು ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮಿಗಳು ಆದೇಶ ಹೊರಡಿಸಿದ್ದಾರೆ.