ಎಸ್. ಡಿ. ದಿಲೀಪ್ ಕುಮಾರ್ ನಾಮಪತ್ರ ಸಲ್ಲಿಕೆ ; ಗುಬ್ಬಿ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಸೇರಿದ ಜನಸಾಗರ

ಗುಬ್ಬಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯಾದ ಎಸ್. ಡಿ ದಿಲೀಪ್ ಕುಮಾರ್ ಅವರು ನಾಮಪತ್ರವನ್ನು ಸಲ್ಲಿಸುವ ಹಿನ್ನೆಲೆಯಲ್ಲಿ ಸಹಸ್ರಾರು ಜನಸಂಖ್ಯೆ ಸೇರಿದ್ದು ಇದುವರೆಗೂ ಗುಬ್ಬಿ ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಜನರು ಜಮಾಯಿಸಿದ್ದು , ಎದುರಾಳಿ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ನಡುಕ ಉಂಟಾಗುವಂತೆ ಮಾಡಿದೆ.

ಇಂದು ಬೆಳಗ್ಗೆ 10 ಗಂಟೆಗೆ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಸಾಗಿದರು ಸಹಸ್ರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜಯಘೋಷದೊಂದಿಗೆ ಮೆರವಣಿಗೆಯು ಬಹಳ ಅದ್ದೂರಿಯಿಂದ ಸಾಗಿತು ಮೆರವಣಿಗೆ ಮಧ್ಯದಲ್ಲಿ ವಿಶೇಷವಾಗಿ ಕೊಬ್ಬರಿಯಿಂದ ತಯಾರಿಸಲಾದ ಬೃಹತ್ ಹಾರ ಹಾಗೂ ಬೃಹತ್ ಆದ ಹೂವಿನ ಹಾರವನ್ನು ಅಭ್ಯರ್ಥಿಗೆ ಕ್ರೇನ್ ಮೂಲಕ ಪುಷ್ಪವೃಷ್ಟಿಗೈಯಾಲಾಯಿತು , ನಂತರ ತಾಲ್ಲೋಕು ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿ ಹೊರಬಂದು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಸ್. ಡಿ. ದಿಲೀಪ್ ಕುಮಾರ್ ಅವರು ನಿಶ್ಚಿತವಾಗಿ ಗೆಲುವು ನಮ್ಮದೇ ಎಂದು ಹೇಳಿದರು.