ತುಮಕೂರು ; ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯ ಮಾರಾಟ ನಿಷೇಧ

ತುಮಕೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸಲು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾದ್ಯಂತ ಮಧ್ಯ ಮಾರಾಟವನ್ನು ನಿಷೇಧಸಲಾಗಿದೆ.

ಮೇ 10 ರಂದು ಚುನಾವಣೆ ನೆಡೆಯುವುದರಿಂದ ಮೇ 8ನೇ ತಾರೀಕು ಸಂಜೆ 6 ಗಂಟೆಯಿಂದ ಮೇ 11ರ ಬೆಳಿಗ್ಗೆ 6 ಗಂಟೆಯವರೆಗೆ ಹಾಗೂ ಮೇ 13 ರಂದು ಮತ ಏಣಿಕೆ ಇರುವ ಪ್ರಯುಕ್ತ ಮೇ 12ರ ಮಧ್ಯರಾತ್ರಿ 12 ಗಂಟೆಯಿಂದ ಮೇ 13 ರ ಮಧ್ಯರಾತ್ರಿ 12 ಗಂಟೆಯವರೆಗೆ ‘ಒಣ ದಿನ’ಗಳೆಂದು ಘೋಷಿಸಿ ಎಲ್ಲಾ ಮಧ್ಯದ ವಹಿವಾಟುಗಳನ್ನು ನಿಷೇಧಿಸಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈ.ಎಸ್.ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.

ಈ ಅವಧಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ, ಹಂಚಿಕೆ, ಸಾಗಾಣಿಕೆಯನ್ನು ನಿಷೇಧಿಸಲು ಅವರು ಸೂಚಿಸಿದ್ದಾರೆ.